ಪೆÇನ್ನಂಪೇಟೆ, ಜು.20: ಕೊರೊನಾ ಪಾಸಿಟಿವ್ ಪ್ರಕರಣಗಳು ಕೊಡಗು ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಹೆಚ್ಚಳ ಕಾಣುತ್ತಿರುವ ಹಿನ್ನೆಲೆಯಲ್ಲಿ ಎಚ್ಚೆತ್ತು ಕೊಂಡಿರುವ ಪೆÇನ್ನಂಪೇಟೆ ಯ ಮಹಾತ್ಮಾ ಗಾಂಧಿ ನಗರದ (ಎಂ. ಜಿ. ನಗರ) ಯುವಕರ ಪಡೆ ಕೊರೊನಾ ವಿರುದ್ಧ ಸಮರಕ್ಕೆ ನಿಂತಿದೆ. ತಮ್ಮ ಬಡಾವಣೆಯನ್ನು ಕೊರೊನಾ ಸೋಂಕಿನಿಂದ ರಕ್ಷಿಸುವ ಸಲುವಾಗಿ ಯುವಕರ ತಂಡ ವಿನೂತನ ಕಾರ್ಯವನ್ನು ಕೈಗೆತ್ತಿ ಕೊಂಡಿದ್ದು, ಬಡಾವಣೆಯ ಸುಮಾರು 20 ಕ್ಕಿಂತಲೂ ಹೆಚ್ಚು ಯುವಕರು ಸೇರಿಕೊಂಡು ಎಂ. ಜಿ. ನಗರಕ್ಕೆ ಕೊರೊನಾ ಕಾಲಿಡದಂತೆ ತಡೆಯುವ ಸಲುವಾಗಿ ಬಡಾವಣೆಯ ಪ್ರವೇಶ ದ್ವಾರದಲ್ಲಿ ಬ್ಯಾರಿಕೇಡ್ ಇಟ್ಟು, ಪಕ್ಕದಲ್ಲಿ ಶಾಮಿಯಾನ ಹಾಕಿಕೊಂಡು ಕಾವಲು ಕುಳಿತಿದ್ದಾರೆ.
ಇತ್ತೀಚೆಗೆ ಹೊರಜಿಲ್ಲೆಯಿಂದ ಕೊಡಗಿಗೆ ಆಗಮಿಸುವವರಿಂದ ಕೊರೊನಾ ಹರಡುತ್ತಿರುವುದನ್ನು ಮನಗಂಡ ಎಂ. ಜಿ. ನಗರದ ಯುವಕರು ಇಂದಿನಿಂದ ತಮ್ಮ ಬಡಾವಣೆಗೆ ಹೊರಜಿಲ್ಲೆಯಿಂದ ಬರುವವರ ಮೇಲೆ ನಿಗಾ ಇಟ್ಟಿದ್ದಾರೆ. ಪ್ರತಿ ದಿನ ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 10 ಗಂಟೆಯ ವರೆಗೆ ಸರತಿ ಪ್ರಕಾರ ಒಂದೊಂದು ತಂಡ ಮಾಡಿಕೊಂಡು ಹೊರಗಿನಿಂದ ತಮ್ಮ ಬಡಾವಣೆಗೆ ಪ್ರವೇಶಿಸುವವರನ್ನು ಥರ್ಮಲ್ ಸ್ಕ್ಯಾನ್ ಮಾಡಿ, ಕೈಯನ್ನು ಸ್ಯಾನಿಟೈಸರ್ ನಿಂದ ಶುಚಿಗೊಳಿಸಿ ಒಳಗೆ ಬಿಡುತ್ತಿದ್ದಾರೆ. ಹೊರ ಜಿಲ್ಲೆಗೆ ಹೋಗಿ ಬಂದವರನ್ನು ಕಡ್ಡಾಯವಾಗಿ ಹೋಮ್ ಕ್ವಾರಂಟೈನ್ ನಲ್ಲಿ ಇರುವಂತೆ ಸಲಹೆ ನೀಡಲಾಗುತ್ತಿದೆ. ಅಲ್ಲದೆ ಪ್ರತಿ ದಿನ ತಮ್ಮ ಬಡಾವಣೆಯಿಂದ ಹೊರಗಡೆ ಕೆಲಸಕ್ಕೆ ಹೋಗಿ ಬರುವವರನ್ನು ಕೂಡ ಥರ್ಮಲ್ ಸ್ಕ್ಯಾನ್ ಮಾಡಿ, ಸ್ಯಾನಿ ಟೈಸರ್ ನೀಡಿ ಒಳಗೆ ಬಿಡುತ್ತಿದ್ದಾರೆ.
ಕೊಡಗಿಗೆ ಆಗಮಿಸುವವರಿಂದ ಕೊರೊನಾ ಹರಡುತ್ತಿರುವುದನ್ನು ಮನಗಂಡ ಎಂ. ಜಿ. ನಗರದ ಯುವಕರು ಇಂದಿನಿಂದ ತಮ್ಮ ಬಡಾವಣೆಗೆ ಹೊರಜಿಲ್ಲೆಯಿಂದ ಬರುವವರ ಮೇಲೆ ನಿಗಾ ಇಟ್ಟಿದ್ದಾರೆ. ಪ್ರತಿ ದಿನ ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 10 ಗಂಟೆಯ ವರೆಗೆ ಸರತಿ ಪ್ರಕಾರ ಒಂದೊಂದು ತಂಡ ಮಾಡಿಕೊಂಡು ಹೊರಗಿನಿಂದ ತಮ್ಮ ಬಡಾವಣೆಗೆ ಪ್ರವೇಶಿಸುವವರನ್ನು ಥರ್ಮಲ್ ಸ್ಕ್ಯಾನ್ ಮಾಡಿ, ಕೈಯನ್ನು ಸ್ಯಾನಿಟೈಸರ್ ನಿಂದ ಶುಚಿಗೊಳಿಸಿ ಒಳಗೆ ಬಿಡುತ್ತಿದ್ದಾರೆ. ಹೊರ ಜಿಲ್ಲೆಗೆ ಹೋಗಿ ಬಂದವರನ್ನು ಕಡ್ಡಾಯವಾಗಿ ಹೋಮ್ ಕ್ವಾರಂಟೈನ್ ನಲ್ಲಿ ಇರುವಂತೆ ಸಲಹೆ ನೀಡಲಾಗುತ್ತಿದೆ. ಅಲ್ಲದೆ ಪ್ರತಿ ದಿನ ತಮ್ಮ ಬಡಾವಣೆಯಿಂದ ಹೊರಗಡೆ ಕೆಲಸಕ್ಕೆ ಹೋಗಿ ಬರುವವರನ್ನು ಕೂಡ ಥರ್ಮಲ್ ಸ್ಕ್ಯಾನ್ ಮಾಡಿ, ಸ್ಯಾನಿ ಟೈಸರ್ ನೀಡಿ ಒಳಗೆ ಬಿಡುತ್ತಿದ್ದಾರೆ.
ದಿವಸಗಳು ಈ ಕಟ್ಟುನಿಟ್ಟಿನ ಮುಂಜಾಗ್ರತಾ ಕ್ರಮವನ್ನು ಕೈಗೊಳ್ಳಲು ತೀರ್ಮಾನಿಸಿದ್ದು, ಅಲ್ಲಿವರೆಗೆ ಜಿಲ್ಲೆಯಲ್ಲಿ ಕೊರೊನಾ ಸೋಂಕು ಹತೋಟಿಗೆ ಬರದಿದ್ದಲ್ಲಿ ಇದನ್ನು ಮುಂದುವರೆಸುವುದಾಗಿ ತಿಳಿಸಿದ್ದಾರೆ.
ಸಾಮಾಜಿಕ ಕಳಕಳಿ ಇರುವ ಯುವಕರು ಒಂದು ಗೂಡಿ ತಮ್ಮ ಬಡಾವಣೆಯನ್ನು ಕೊರೊನಾ ಮುಕ್ತ ಬಡಾವಣೆಯನ್ನಾಗಿಸಲು ಪಣತೊಟ್ಟಿರುವುದು ಉತ್ತಮ ಬೆಳವಣಿಗೆಯಾಗಿದೆ. ಒಟ್ಟಿನಲ್ಲಿ ಜನತೆಯ ಆರೋಗ್ಯದ ಹಿತದೃಷ್ಟಿ ಯಿಂದ ಕೈಗೊಳ್ಳಲಾಗಿರುವ ಯುವಕರ ಈ ತೀರ್ಮಾನಕ್ಕೆ ಎಂ. ಜಿ. ನಗರದ ಪ್ರತಿಯೊಬ್ಬ ನಾಗರಿಕರೂ ಬದ್ದರಾಗಿದ್ದು ಕೊರೊನಾ ಸೋಂಕನ್ನು ಬಡಿದೋಡಿಸುವಲ್ಲಿ ಕೈಜೋಡಿಸ ಬೇಕಿದೆ.
ಕೊಡಗಿನ ಪ್ರತಿಯೊಂದು ಗ್ರಾಮದಲ್ಲಿಯೂ ಕೂಡ ಈ ಯುವಕರ ರೀತಿಯಲ್ಲಿ ಯುವಜನತೆ ಜಾಗೃತರಾಗಿ ಮುಂದೆ ನಿಂತು ಕೊರೊನಾ ಮಹಾಮಾರಿಯ ವಿರುದ್ಧ ಸಮರ ಸಾರಿದರೆ ಕೊಡಗು ಆದಷ್ಟು ಬೇಗ ಕೊರೊನಾ ಮುಕ್ತ ಜಿಲ್ಲೆಯಾಗು ವುದರಲ್ಲಿ ಯಾವುದೇ ಸಂಶಯವಿಲ್ಲ. ಸೋಂಕು ಬಂದಾಗ ಗುಣಪಡಿಸಿ ಕೊಳ್ಳಲು ಹೆಣಗಾಡುವು ದಕ್ಕಿಂತ ಸೋಂಕು ಹರಡದಂತೆ ತಡೆಯುವುದೇ ಜಾಣತನವಲ್ಲವೇ....? -ಚನ್ನನಾಯಕ