ವೀರಾಜಪೇಟೆ, ಜು.20: ವೀರಾಜಪೇಟೆ ಬಳಿಯ ಕೆದ ಮುಳ್ಳೂರು ಗ್ರಾಮದ ಅರಣ್ಯದಲ್ಲಿ ಕಾಡು ಕುರಿಯನ್ನು ಬೇಟೆಯಾಡಿದ ಆರೋಪದ ಮೇರೆ ಅರಣ್ಯಾಧಿಕಾರಿ ಗಳು 3 ಕೆಜಿ ಮಾಂಸ ಸಮೇತ ವಿಶ್ವನಾಥ್ ಎಂಬಾತನನ್ನು ಬಂಧಿಸಿದ್ದಾರೆ.

ಕೆದಮುಳ್ಳೂರು ಗ್ರಾಮದ ಮಹೇಶ್ ಎಂಬವರ ಲೈನು ಮನೆಯಲ್ಲಿ ವಾಸವಿದ್ದ ವಿಶ್ವನಾಥ್ ನಿನ್ನೆ ಅರಣ್ಯದಲ್ಲಿ ಕಾಡು ಕುರಿಯನ್ನು ಬೇಟೆಯಾಡಿ ಅದನ್ನು ಮಾಂಸ ಮಾಡಿರುವ ಸುಳಿವು ದೊರೆತ ಮೇರೆ ಅರಣ್ಯಾಧಿಕಾರಿಗಳು ಇಂದು ಬೆಳಿಗ್ಗೆ ವಿಶ್ವನಾಥ್ ಮನೆಯ ಮೇಲೆ ದಾಳಿ ನಡೆಸಿ ಕಾಡು ಕುರಿ ಮಾಂಸ ಹಾಗೂ ಹತ್ಯೆಗೆ ಬಳಸಿದ ಕತ್ತಿಯನ್ನು ವಶ ಪಡಿಸಿಕೊಂಡಿದ್ದಾರೆ.

ಅರಣ್ಯಾಧಿಕಾರಿ ಕೊಣೇರಿರ ರೋಶಿಣಿ ಅವರ ಮಾರ್ಗದರ್ಶನದಲ್ಲಿ, ಆರ್.ಎಫ್‍ಓ ದಿಲೀಪ್, ಡೆಪ್ಯುಟಿ ರೇಂಜರ್ ದೇಯಂಡ ಸಂಜಿತ್ ಸೋಮಯ್ಯ, ಅರಣ್ಯ ರಕ್ಷಕÀ ನಾಗರಾಜ್, ವಿಕಾಶ, ಜೀತೇಶ್, ಮೊಣ್ಣಪ್ಪ, ಪ್ರಕಾಶ್, ಸಚಿನ್, ಪೊನ್ನಪ್ಪ ಕಾರ್ಯಾ ಚರಣೆಯಲ್ಲಿ ಭಾಗವಹಿಸಿದ್ದರು.