ಮಡಿಕೇರಿ, ಜು.20: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ವತಿಯಿಂದ ವಿವಿಧ ಕೊಡವ ಸಮಾಜ, ಸಂಸ್ಥೆಗಳಿಗೆ ದುಡಿ ನೀಡುವ ಕಾರ್ಯಕ್ರಮವು ಇತ್ತೀಚೆಗೆ ಅಕಾಡೆಮಿಯ ಸದಸ್ಯರ ಉಪಸ್ಥಿತಿಯಲ್ಲಿ ನಡೆಯಿತು.
ಅಕಾಡೆಮಿ ಅಧ್ಯಕೆÀ್ಷ ಡಾ.ಅಮ್ಮಾಟಂಡ ಪಾರ್ವತಿ ಅಪ್ಪಯ್ಯ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ ಎಲ್ಲರೂ ಕೊಡವ ಭಾಷೆ, ಸಂಸ್ಕøತಿ, ಜನಪದ, ಕಲೆ, ಸಾಹಿತ್ಯವನ್ನು ಉಳಿಸಿ ಬೆಳೆಸಲು ಸಹಕಾರ ನೀಡಬೇಕು ಹಾಗೂ ಅಕಾಡೆಮಿ ನೀಡಿದ ದುಡಿಗಳ ಸದುಪಯೋಗ ಪಡೆದುಕೊಳ್ಳುವಂತೆ ಸಲಹೆ ಮಾಡಿದರು.
ಡಾ.ಮೇಚಿರ ಸುಭಾಷ್ ನಾಣಯ್ಯ ಹಾಗೂ ಕುಡಿಯರ ಮುತ್ತಪ್ಪ ಮಾತನಾಡಿದರು. ದುಡಿಯನ್ನು ಪಡೆದುಕೊಂಡ ಸಂಘ ಸಂಸ್ಥೆಗಳ ಪದಾಧಿಕಾರಿಗಳು ದುಡಿಯನ್ನು ಪಡೆದ ಪ್ರಯುಕ್ತ ಕೊಡವ ಸಾಹಿತ್ಯ ಅಕಾಡೆಮಿಗೆ ವಂದನೆ ಸಲ್ಲಿಸಿದರು. ಅಕಾಡೆಮಿ ಸದಸ್ಯರಾದ ಮಾಚಿಮಾಡ ಜಾನಕಿ, ಗೌರಮ್ಮ ಮಾದಮ್ಮಯ್ಯ, ಕನ್ನಡ ಸಂಸ್ಕøತಿ ಇಲಾಖೆಯ ಪ್ರಭಾರ ನಿರ್ದೇಶಕ ಕೆ.ಟಿ.ದರ್ಶನ್ ಇತರರು ಇದ್ದರು.
15 ಸಂಘ ಸಂಸ್ಥೆಗಳಿಗೆ ದುಡಿಯನ್ನು ನೀಡಲಾಯಿತು. ಬಬ್ಬಿರ ಸರಸ್ವತಿ ಪ್ರಾರ್ಥಿಸಿದರು. ರಿಜಿಸ್ಟ್ರಾರ್ ಎ.ಸಿ.ಗಿರೀಶ ಸ್ವಾಗತಿಸಿದರು. ಅಕಾಡೆಮಿ ಸದಸ್ಯ ಪಡಿಞರಂಡ ಪ್ರಭು ವಂದಿಸಿದರು.