ಚೆಟ್ಟಳ್ಳಿ, ಜು. 19: ಕೊರೊನಾ ವೈರಸ್‍ನಿಂದ ಸೀಲ್‍ಡೌನ್ ಆಗಿದ್ದ ಸಿದ್ದಾಪುರ ಸಮೀಪದ ಹುಂಡಿ ಗ್ರಾಮದ ಪ್ರದೇಶವೊಂದರಲ್ಲಿ 65 ಕುಟುಂಬಗಳು ವಾಸಿಸುತ್ತಿವೆ.

ಇವರಗಳ ಸಂಕಷ್ಟಕ್ಕೆ ಸ್ಪಂದಿಸಿ ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಷನ್ ಅಬುದಾಬಿ ಯು.ಎ.ಇ ಸಮಿತಿ ವತಿಯಿಂದ ಸೀಲ್ ಡೌನ್ ಪ್ರದೇಶದಲ್ಲಿದ್ದ ಕುಟುಂಬಗಳಿಗೆ ನೆರವು ನೀಡಲು ರೂ. 25000 ನೆರವನ್ನು ಹುಂಡಿ ಮರ್ಕಝ್ ಸಮಿತಿಗೆ ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ಕೆ.ಎಸ್.ಡಬ್ಲ್ಯೂ ಅಬುದಾಬಿ ಅಧ್ಯಕ್ಷ ಹಂಝ ಪೆÇನ್ನಂಪೇಟೆ, ಉಪಾಧ್ಯಕ್ಷ ಅರಾಫತ್ ನಾಪೆÇೀಕ್ಲು, ಕ್ಯಾಬಿನೆಟ್ ಸದಸ್ಯರಾದ ಸಲಾಂ ಕೊಂಡಗೇರಿ, ಮುಝಮ್ಮಿಲ್ ಜಾಮೆ,ಅಬ್ಬಾಸ್ ಸುಂಟಿಕೊಪ್ಪ ಇದ್ದರು.