ಗೋಣಿಕೊಪ್ಪ ವರದಿ, ಜು. 19: ಮೈಸೂರಮ್ಮ ನಗರದ ಸೀಲ್‍ಡೌನ್ ಮತ್ತು ಕ್ವಾರಂಟೈನ್‍ನಲ್ಲಿರುವ ಜನರಿಗೆ ಆಹಾರ ವಸ್ತುಗಳನ್ನು ಸ್ಥಳೀಯ ಯುವಕರು ವಿತರಣೆ ಮಾಡಿದರು. ಕೊರೊನಾದಿಂದ ಸೀಲ್‍ಡೌನ್ ಆಗಿರುವ ಪ್ರದೇಶದ ಜನರಿಗೆ ಮತ್ತು ಕ್ವಾರಂಟೈನ್‍ನಲ್ಲಿರುವವರು ಸೇರಿ ಸುಮಾರು 68 ಕಿಟ್ ವಿತರಿಸಲಾಯಿತು. ರಹೀಂ ತರಕಾರಿ ನೀಡಿ ಸಹಕರಿಸಿದರು. ಯುವಕರ ಸ್ಪಂದನಕ್ಕೆ ಶ್ಲಾಘನೆ ವ್ಯಕ್ತವಾಗಿದೆ.