ನಾಪೋಕ್ಲು, ಜು. 19: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವೀರಾಜಪೇಟೆ ಮಡಿಕೇರಿ ಹಾಗೂ ಕೃಷಿ ಇಲಾಖೆ ಮಡಿಕೇರಿ ಸಿಹೆಚ್‍ಎಸ್‍ಸಿ ಅಮ್ಮತ್ತಿ ಚೇರಂಬಾಣೆ ವತಿಯಿಂದ ಚೆರಿಯಮನೆ ಬೋಜಪ್ಪ ಅವರ ಗದ್ದೆಯಲ್ಲಿ ಯಾಂತ್ರೀಕೃತ ಬೇಸಾಯಕ್ಕೆ ಚಾಲನೆ ನೀಡಲಾಯಿತು.

ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯಂತ್ರಶ್ರೀ ಕಾರ್ಯಕ್ರಮದಲ್ಲಿ ನಾಟಿಯ ಪ್ರಾತ್ಯಕ್ಷಿಕೆ ನಡೆಯಿತು. ಯೋಜನೆಯ ಕೃಷಿ ಅಧಿಕಾರಿ ಕೆ. ಚೇತನ್, ಪ್ರಬಂಧಕರಾದ ಸಚಿನ್, ದೇವರಾಜ್, ಮೇಲ್ವಿಚಾರಕ ಹರೀಶ್ ಕುಲಾಲ್ ಪಾಲ್ಗೊಂಡಿದ್ದರು. ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಶಿವಪ್ರಕಾಶ್ ಇದ್ದರು. ಎರಡು ಎಕರೆಯಲ್ಲಿ ಯಾಂತ್ರೀಕೃತ ನಾಟಿಯನ್ನು ಮಾಡಲಾಯಿತು.