ಮಡಿಕೇರಿ, ಜು 18: ಪ್ರಸಕ್ತ ವರ್ಷಾರಂಭದಿಂದ ಇದುವರೆಗೆ ದಕ್ಷಿಣ ಕೊಡಗಿನ ಬಿರುನಾಣಿ, ಪೂಕಳ, ಟಿ. ಶೆಟ್ಟಿಗೇರಿ ವ್ಯಾಪ್ತಿಯಲ್ಲಿ 70 ಇಂಚು ಸರಾಸರಿ ಮಳೆಯಾಗಿದೆ. ಜನವರಿಯಿಂದ ಜೂನ್ ಅಂತ್ಯದ ತನಕ 35 ಇಂಚು ಮಳೆಯಾಗಿದ್ದು, ಈ ವ್ಯಾಪ್ತಿಗೆ ಜುಲೈನಲ್ಲಿ ಇಂದಿನ ತನಕ 35 ಇಂಚು ಮಳೆಯೊಂದಿಗೆ ಒಟ್ಟು 70 ಇಂಚು ದಾಖಲಾಗಿದೆ. ಪರಿಣಾಮ ಕಾಫಿ ಉದುರತೊಡಗಿವೆ ಎಂದು ಪೂಕಳ ಗ್ರಾಮದ ನಿವೃತ್ತ ಸೈನಿಕ ಕಾಳಿಮಾಡ ಅಪ್ಪಯ್ಯ ‘ಶಕ್ತಿ’ಗೆ ಮಾಹಿತಿ ನೀಡಿದ್ದಾರೆ. ಪ್ರಸಕ್ತ ನಿತ್ಯ ಮಳೆಯಿಂದ ಈ ಸಮಸ್ಯೆ ಎದುರಾಗಿದೆ ಎಂದು ಬೇಸರ ವ್ಯಕ್ತಪಡಿಸಿದ ಅವರು, ರೈತ ಸಂಪರ್ಕ ಕೇಂದ್ರದಲ್ಲಿ ಗೊಬ್ಬರ ಸಮಸ್ಯೆಯು ತಲೆದೋರಿದ್ದು, ಸಂಬಂಧಿಸಿದ ಅಧಿಕಾರಿಗಳು ಗಮನ ಹರಿಸುವಂತೆ ಕೋರಿದ್ದಾರೆ. ಇತ್ತ ಕಳೆದ 24 ಗಂಟೆಗಳಲ್ಲಿ ತಲಕಾವೇರಿ ವ್ಯಾಪ್ತಿಯಲ್ಲಿ 3.85 ಇಂಚು, ಶಾಂತಳ್ಳಿಗೆ 3.43 ಇಂಚು, ಭಾಗಮಂಡಲ ಸುತ್ತಮುತ್ತ 3 ಇಂಚು ಮಳೆಯಾಗಿದೆ. ಜಿಲ್ಲೆಯಲ್ಲಿ ಸರಾಸರಿ 1.41 ಇಂಚು ಮಳೆ ಬಿದ್ದಿದೆ. ಮಡಿಕೇರಿ ತಾಲೂಕಿಗೆ 1.46 ಇಂಚು, ವೀರಾಜಪೇಟೆ ತಾಲೂಕು ವ್ಯಾಪ್ತಿಯಲ್ಲಿ 1.46 ಇಂಚು, ಸೋಮವಾರಪೇಟೆ ತಾಲೂಕಿಗೆ ಸರಾಸರಿ 1.06 ಇಂಚು ಮಳೆಯಾಗಿದೆ.ಉಳಿದಂತೆ ಜಿಲ್ಲಾ ಕೇಂದ್ರ ಮಡಿಕೇರಿಗೆ 1.38 ಇಂಚು, ನಾಪೋಕ್ಲು 1.38 ಇಂಚು, ಸಂಪಾಜೆ 1.45 ಇಂಚು ಮಳೆ ದಾಖಲಾಗಿದೆ. ವೀರಾಜಪೇಟೆ 1.29 ಇಂಚು, ಹುದಿಕೇರಿ 2.79 ಇಂಚು, ಶ್ರೀಮಂಗಲ 1.41 ಇಂಚು, ಪೊನ್ನಂಪೇಟೆಗೆ 1.40 ಇಂಚು, ಅಮ್ಮತ್ತಿ 0.98 ಹಾಗೂ ಬಾಳೆಲೆಯಲ್ಲಿ 1 ಇಂಚು ಮಳೆಯಾಗಿದೆ.

ಉತ್ತರ ಕೊಡಗಿನ ಗ್ರಾಮಾಂತರ ಪ್ರದೇಶಗಳಾದ ಮುಟ್ಲು, ಹಮ್ಮಿಯಾಲ, ಕುಂಬಾರಗಡಿಗೆ, ಸೂರ್ಲಬ್ಬಿ, ಪುಷ್ಪಗಿರಿ ತಪ್ಪಲು ಗ್ರಾಮಗಳಲ್ಲಿ ಸರಾಸರಿ 4 ಇಂಚು ಮಳೆಯಾಗಿದೆ. ಸೋಮವಾರಪೇಟೆ ತಾಲೂಕು

(ಮೊದಲ ಪುಟದಿಂದ) ಕೇಂದ್ರದಲ್ಲಿ 0.66 ಇಂಚು, ಶನಿವಾರಸಂತೆ 0.39 ಹಾಗೂ ಕೊಡ್ಲಿಪೇಟೆ 1 ಇಂಚು ಮಳೆಯಾಗಿದೆ. ಕುಶಾಲನಗರ 0.25, ಸುಂಟಿಕೊಪ್ಪ 0.63, ಹಾರಂಗಿ 0.41 ಇಂಚು ಮಳೆ ದಾಖಲಾಗಿದೆ.

ಹಾರಂಗಿ ಜಲಾಶಯ: ಹಾರಂಗಿ ಜಲಾಶಯದ ನೀರಿನ ಮಟ್ಟ 2853.53 ಅಡಿಗಳಿದ್ದು, ಜಲಾಶಯಕ್ಕೆ 5056 ಕ್ಯೂಸೆಕ್ ಒಳ ಹರಿವಿನೊಂದಿಗೆ 4104 ಕ್ಯೂಸೆಕ್ ನೀರು ಹೊರಬಿಡಲಾಗಿದೆ.