ವೀರಾಜಪೇಟೆ, ಜು. 19: ವ್ಯಕ್ತಿಯೋರ್ವರು ಕೆರೆಯಲ್ಲಿ ಬಿದ್ದು ಸಾವನ್ನಪ್ಪಿರುವ ಘಟನೆ ವೀರಾಜಪೇಟೆ ಆರ್ಜಿ ಕಿರುಮಕ್ಕಿಯಲ್ಲಿ ನಡೆದಿದೆ.
ಆರ್ಜಿ ಪಂಚಾಯಿತಿ ವ್ಯಾಪ್ತಿಯ ತರ್ಮೆಕಾಡು ಪೈಸಾರಿ ನಿವಾಸಿ ವೈ.ಎನ್.ರವಿ (38) ಸಾವನ್ನಪ್ಪಿರುವ ದುರ್ದೈವಿ. ಮೃತನು ಆರ್ಜಿ ಗ್ರಾಮ ಪಂಚಾಯತಿಯ ಸದಸ್ಯೆ ಗಂಗಮ್ಮ ಅವರ ಮಗನಾಗಿದ್ದು, ನಾಲ್ಕು ವರ್ಷಗಳ ಹಿಂದೆ ಈತನ ಪತ್ನಿ ಮತ್ತು ಮಗು ಸಾವನ್ನಪ್ಪಿದ್ದರು. ಮನೆ ತ್ಯಜಿಸಿದ ಈತ ಹಾಲುಗುಂದ ಗ್ರಾಮದ ಕಾಫಿ ತೋಟದಲ್ಲಿ ಕಾರ್ಮಿಕನಾಗಿ ದುಡಿಯುತ್ತಿದ್ದ ಎನ್ನಲಾಗಿದೆ. ಕಳೆದ ಹದಿನಾಲ್ಕು ದಿನಗಳ ಹಿಂದೆ ತಾಯಿ ಮನೆಗೆ ಆಗಮಿಸಿದ್ದು, ಮಾತನಾಡಿಸಿ ತೆರಳಿದ್ದಾನೆ.
ಇಂದು ಕಿರುಮಕ್ಕಿ ಗ್ರಾಮದ ಪುಂಡರಿಕಾಕ್ಷ ಎಂಬವರ ತೋಟದ ಕೆರೆಯಲ್ಲಿ ದುರ್ವಾಸನೆ ಬರುತ್ತಿದೆ ಎಂದು ಕಾರ್ಮಿಕರು ತಿಳಿಸಿದ್ದು, ಸ್ಥಳಕ್ಕೆ ಬಂದ ಮಾಲೀಕರಿಗೆ ಕೆರೆಯಲ್ಲಿ ಶವ ಗೋಚರಿಸಿದೆ. ನಗರ ಪೆÇಲೀಸ್ ಠಾಣೆಗೆ ಮಾಹಿತಿ ನೀಡಿದ್ದು, ಪರಿಶೀಲನೆ ಮಾಡಿದ ಪೆÇಲೀಸರು ಶರೀರವು ಗುರುತು ಬಾರದ ಸ್ಥಿತಿಯಲ್ಲಿದ್ದು ಮಾಹಿತಿ ರವಾನಿಸಿದ್ದಾರೆ. ನಂತರದಲ್ಲಿ ಮೃತದೇಹದಲ್ಲಿದ ಧರಿಸಿದ ಅಂಗಿಯನ್ನು ಪತ್ತೆ ಮಾಡಿದ ಮೃತನ ತಾಯಿಯ ಅನುಮತಿ ಮೇರೆಗೆ ವೀರಾಜಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಶವ ಪರೀಕ್ಷೆ ನಡೆಸಿ ಕುಟುಂಬದ ಸದಸ್ಯರಿಗೆ ಹಸ್ತಾಂತರ ಮಾಡಲಾಯಿತು. ಪ್ರಕರಣಕ್ಕೆ ಸಂಬಂಧಿಸಿದಂತೆ ನಗರ ಪೆÇಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲಾಗಿದೆ. -ಕೆ.ಕೆ.ಎಸ್