ಮಡಿಕೇರಿ, ಜು. 18: ಜಿಲ್ಲೆಯಲ್ಲಿ ತಾ.18 ರಂದು 9 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ. ಈ ಪೈಕಿ ಓರ್ವ ವ್ಯಕ್ತಿ ಹೃದಯಾಘಾತ ದಿಂದ ತಾ. 14 ರಂದು ಸಾವನ್ನಪ್ಪಿದ್ದು, ತಾ.18 ರಂದು ಅವರಿಗೂ ಸೋಂಕು ಇದ್ದ ವರದಿ ಬಂದಿದ್ದು, ‘ಕೊರೊನಾ ಸಾವು’ ಎಂದೇ ಪರಿಗಣಿಸಲಾಗಿದೆ. ವೀರಾಜಪೇಟೆ ತಾಲೂಕಿನ ಹುದಿಕೇರಿಯ ಹೈಸೊಡ್ಲೂರುವಿನ 58 ವರ್ಷದ ಪುರುಷ ತಾ.14 ರಂದು ಖಾಸಗಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ಮರಣ ಹೊಂದಿದ್ದಾರೆ. ಇವರ ಶವಸಂಸ್ಕಾರವು ಅಂದೇ ನಡೆದಿದ್ದು ತಾ.18 ರಂದು ಬಂದ ವರದಿಯಲ್ಲಿ ಕೊರೊನಾ ಸೋಂಕು ಇರುವುದು ದೃಢವಾಗಿದೆ. ಇದ್ದರಿಂದ ಜಿಲ್ಲೆಯಲ್ಲಿ ಕೊರೊನಾದಿಂದ ಸಾವನ್ನಪ್ಪಿದವರ ಸಂಖ್ಯೆ 5 ಕ್ಕೆ ಏರಿಕೆಯಾಗಿದೆ. ತಾ. 18 ರಂದು 19 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.
ಇನ್ನುಳಿದ ಪ್ರಕರಣಗಳ ವಿವರವೀರಾಜಪೇಟೆಯ ಅಪ್ಪಯ್ಯ ಸ್ವಾಮಿ ರಸ್ತೆಯ ಬೆಂಗಳೂರು ಪ್ರಯಾಣದ ಇತಿಹಾಸ ಹೊಂದಿರುವ 35 ವರ್ಷದ ಪುರುಷ ಮತ್ತು 14 ವರ್ಷದ ಬಾಲಕ, 64 ವರ್ಷದ ಪುರುಷ ಮತ್ತು 60 ವರ್ಷ ಪ್ರಾಯದ ಮಹಿಳೆಗೆ ಸೋಂಕು ದೃಢಪಟ್ಟಿದೆ. ಮಡಿಕೇರಿ ತಾಲೂಕಿನ ಕಾನ್ವೆಂಟ್ ಜಂಕ್ಷನ್ ಬಳಿಯ ಟಿ.ಜಾನ್ ಲೇಔಟ್ನ 27 ವರ್ಷದ ಪುರುಷನಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಗೋಣಿಕೊಪ್ಪದ 56 ವರ್ಷದ ಮಹಿಳಾ ಆರೋಗ್ಯ ಕಾರ್ಯಕರ್ತರಿಗೂ ಸಹ ಸೋಂಕು ದೃಢಪಟ್ಟಿದೆ. ಅಲ್ಲದೆ ಮಡಿಕೇರಿಯ ತಾಳತ್ಮನೆಯ 2ನೇ ಕ್ರಾಸ್ ನಿವಾಸಿ ಬೆಂಗಳೂರು ಪ್ರಯಾಣದ ಇತಿಹಾಸವಿರುವ 43 ವರ್ಷದ ಪುರುಷನಿಗೂ ಸೋಂಕು ದೃಢಪಟ್ಟಿದೆ. ಕುಶಾಲನಗರದ ಕಣಿವೆಯ ಭುವನಗಿರಿ ಗ್ರಾಮದ ಬೆಂಗಳೂರು ಪ್ರಯಾಣದ ಇತಿಹಾಸ ಹೊಂದಿರುವ 25 ವರ್ಷ ಪ್ರಾಯದ ಪುರುಷನಿಗೆ ಸೋಂಕು ದೃಢಪಟ್ಟಿದೆ. ಹೊಸ ನಿಯಂತ್ರಿತ ಪ್ರದೇಶಗಳು ಜಿಲ್ಲೆಯಲ್ಲಿ 5 ಹೊಸ ನಿಯಂತ್ರಿತ ಪ್ರದೇಶಗಳನ್ನು ತೆರೆಯಲಾಗಿದೆ. ವೀರಾಜಪೇಟೆಯ ಅಪ್ಪಯ್ಯ ಸ್ವಾಮಿ ರಸ್ತೆ, ವೀರಾಜಪೇಟೆ ತಾಲೂಕಿನ ಹುದಿಕೇರಿಯ ಹೈಸೊಡ್ಲೂರು, ಮಡಿಕೇರಿ ತಾಲೂಕಿನ ಕಾನ್ವೆಂಟ್ ಜಂಕ್ಷನ್ ಬಳಿಯ ಟಿ.ಜಾನ್ ಲೇಔಟ್, ಮಡಿಕೇರಿಯ ತಾಳತ್ಮನೆಯ 2ನೇ ಕ್ರಾಸ್, ಕುಶಾಲನಗರದ ಕಣಿವೆಯ ಭುವನಗಿರಿ ಗ್ರಾಮ.