ಮಡಿಕೇರಿ, ಜು. 19: ತಾ.19 ರಂದು ಜಿಲ್ಲೆಯಲ್ಲಿ ಹೊಸದಾಗಿ 10 ಕೊರೊನಾ ಪ್ರಕರಣಗಳು ವರದಿಯಾಗಿವೆ. ಇದುವರೆಗೆ 274 ಪ್ರಕರಣಗಳು ವರದಿಯಾಗಿದ್ದು, ಇದರಲ್ಲಿ 183 ಮಂದಿ ಗುಣಮುಖರಾಗಿದ್ದು, 5 ಮಂದಿ ಸಾವನ್ನಪ್ಪಿದ್ದಾರೆ. ಒಟ್ಟು 86 ಪ್ರಕರಣಗಳು ಸಕ್ರಿಯವಾಗಿವೆ. ಜಿಲ್ಲೆಯಾದ್ಯಂತ 112 ನಿಯಂತ್ರಿತ ಪ್ರದೇಶಗಳಿವೆ. ಹೊಸ ಪ್ರಕರಣಗಳ ವಿವರ ಸೋಮವಾರಪೇಟೆಯ ಕಕ್ಕೆಹೊಳೆಯ 32 ವರ್ಷದ ಮಹಿಳೆ ಹಾಗೂ 26 ವರ್ಷದ ಮಹಿಳೆಗೆ ಕೊರೊನಾ ದೃಢಪಟ್ಟಿದೆ. ಕುಶಾಲನಗರದ ತೊರೆನೂರಿನ 25 ವರ್ಷದ ಪುರುಷ, 48 ವರ್ಷದ ಮಹಿಳೆ, 76 ವರ್ಷದ ಮಹಿಳೆಗೆ ಸೋಂಕು ದೃಢವಾಗಿದೆ. ಗೋಣಿಕೋಪ್ಪ ಹೆಚ್.ಸಿ.ಪುರದ ನಿವಾಸಿ 20 ವರ್ಷದ ಮಹಿಳೆ ಬೆಂಗಳೂರಿನಿಂದ ಹಿಂತಿರುಗಿದ್ದು ಅವರಲ್ಲೂ ಸೋಂಕು ಪತ್ತೆಯಾಗಿದೆ. ಮಡಿಕೇರಿಯ ಅವಂದೂರಿನ 38 ವರ್ಷ ವಯಸ್ಸಿನ ಪುರುಷ ಬೆಂಗಳೂರಿನಿಂದ ಹಿಂತಿರುಗಿದ್ದು ಸೋಂಕು ದೃಢವಾಗಿದೆ. ಕುಶಾಲನಗರ ಬಲಮುರಿ ಕಾಲನಿಯ 7 ವರ್ಷದ ಹುಡುಗನಿಗೆ ಸೋಂಕು ತಗುಲಿದೆ. ವಾಲ್ನೂರಿನ 28 ವರ್ಷದ ಮಹಿಳೆ ಸೇರಿದಂತೆ ಗೋಣಿಕೊಪ್ಪದ 2ನೇ ಬ್ಲಾಕ್ನ 39 ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದೆ.
ಹೊಸ ನಿಯಂತ್ರಿತ ಪ್ರದೇಶಗಳು
ಅವಂದೂರು ಹಾಗೂ ಗೋಣಿಕೊಪ್ಪದ 2ನೇ ಬ್ಲಾಕ್ನಲ್ಲಿ ಹೊಸದಾಗಿ ನಿಯಂತ್ರಿತ ಪ್ರದೇಶಗಳನ್ನು ತೆರೆಯಲಾಗಿದೆ.