ಮಡಿಕೇರಿ, ಜು. 18: ಇಲ್ಲಿನ ಎಪಿಎಂಸಿ ಸಭಾಂಗಣದಲ್ಲಿ ಸಭೆ ಸೇರಿ ಬಿ.ಜೆ.ಪಿ.ಯ ವಿವಿಧ ಮೋರ್ಚಾಗಳ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ಸಭೆಯಲ್ಲಿ ಬಿ.ಜೆ.ಪಿ. ಮಡಿಕೇರಿ ಮಂಡಲ ಅಧ್ಯಕ್ಷ ಕಾಂಗಿರ ಸತೀಶ್, ಪ್ರಧಾನ ಕಾರ್ಯದರ್ಶಿಗಳಾದ ಡೀನ್ ಬೋಪಣ್ಣ ಹಾಗೂ ಪ್ರಸನ್ನ, ವಿವಿಧ ಮೋರ್ಚಾ ಅಧ್ಯಕ್ಷರುಗಳಾದ ಗಿರೀಶ್, ಕವಿತ ಬೆಳ್ಯಪ್ಪ, ತೋರೆರ ಹೇಮಂತ್, ಜಗದೀಶ್, ಯೊಗೇಶ್ ಹೆಚ್.ಜಿ., ಬೆಪ್ಪುರನ ಮೇದಪ್ಪ, ಮಾಜಿ ಅಧ್ಯಕ್ಷ ಅಂಬಿ ಕಾರ್ಯಪ್ಪ, ತಾಲೂಕು ಪಂಚಾಯಿತಿ ಸದಸ್ಯರುಗಳಾದ ಕುಮುದ ರಶ್ಮಿ, ಉಮಾಪ್ರಭು, ಧನಂಜಯ ಮೊದಲಾದವರು ಭಾಗವಹಿಸಿದ್ದರು.