ಕೂಡಿಗೆ, ಜು 18: ಕುಶಾಲನಗರ ಅರಣ್ಯ ವಲಯ ಅತ್ತೂರು ಉಪ ಅರಣ್ಯ ಇಲಾಖೆಯ ವತಿಯಿಂದ ಬೆಂಡೆಬೆಟ್ಟದಿಂದ ಗೋದಿ üಬಸವನಹಳ್ಳಿಯವರೆಗೆ ಕಾಡಾನೆಗಳು ದಾಟದ ಹಾಗೆ ಕಂದಕವನ್ನು ತೆಗೆಯಲಾಗಿತ್ತು.

ಆರು ಕಿಲೋಮೀಟರ್ ದೂರದವರೆಗೆ ಆನೆ ಕಂದಕವನ್ನು ತೆಗೆಯಲಾಗಿತ್ತು. ಕೆಲ ಜಾಗಗಳಲ್ಲಿ ಬೃಹತ್ ಕಲ್ಲಿನ ಬಂಡೆಗಳಿದ್ದವು. ಆನೆಕಾಡಿನ ಕಾಡಾನೆಗಳು ಈ ಕಲ್ಲು ಬಂಡೆಗಳನ್ನು ದಾಟಿ ಸಮೀಪದ ಗ್ರಾಮಗಳಾದ ಹಾರಂಗಿ, ಹುದುಗೂರು, ಚಿಕ್ಕತ್ತೂರು ಕಡೆಗಳಲ್ಲಿ ರೈತರ ಜಮೀನಿಗೆ ದಾಳಿ ಮಾಡಿ ಬೆಳೆಗಳನ್ನು ನಷ್ಟಪಡಿಸಿದ್ದವು.

ಇದನ್ನು ಅರಿತ ಅರಣ್ಯ ಇಲಾಖೆಯವರು ಕಲ್ಲುಗಳನ್ನು ತೆಗೆಯುವ ಕಾರ್ಯ ಪ್ರಾರಂಭ ಮಾಡಿದ್ದಾರೆ. ಇದರಿಂದಾಗಿ ಕಾಡಾನೆಗಳು ಈ ಕಂದಕವನ್ನು ದಾಟಿ ಬರುವುದು ಕಡಿಮೆಯಾಗಿದೆ. ಈ ಕಾರ್ಯದಲ್ಲಿ ಅತ್ತೂರು ಉಪ ಅರಣ್ಯ ವಲಯಾಧಿಕಾರಿ ಡಿಸೋಜ, ಸಿಬ್ಬಂದಿ ವರ್ಗದವರು ಹಾಜರಿದ್ದರು.