ಗೋಣಿಕೊಪ್ಪ ವರದಿ, ಜು. 19: ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿ ಭಾನುವಾರ ಮಧ್ಯಾಹ್ನ ದಿಢೀರ್ ಮಳೆ ಸುರಿಯಿತು. ಗುಡುಗು ಸಮೇತ ಉತ್ತಮ ಮಳೆಯಾಯಿತು. ಶನಿವಾರದಿಂದ ಭಾನುವಾರ ಮಧ್ಯಾಹ್ನದವರೆಗೂ ಮಳೆಯಾಗಲಿಲ್ಲ. ಬಿಸಿಲಿನ ವಾತಾವರಣ ಕಂಡುಬಂತು. ಮುಂಜಾನೆ ಆರಂಭಗೊಂಡ ಸೂರ್ಯನ ದರ್ಶನ ಸಾಯಂಕಾಲದವರೆಗೂ ಇತ್ತು. ಅರ್ಧಗಂಟೆ ಮಳೆ ಸುರಿದ ನಂತರ ಮತ್ತೆ ಬಿಸಿಲಿನ ವಾತಾವರಣ ಇತ್ತು.