ಕಾರ್ಮಿಕರಿಂದ ಕೆಲಸ: ಕ್ರಮ

ಕುಶಾಲನಗರ, ಜು. 18: ಬಿಹಾರ ಮೂಲದ ಹೋಂ ಕ್ವಾರಂಟೈನ್‍ಗೆ ಒಳಗಾದ ಕಾರ್ಮಿಕರಿಂದ ಕೆಲಸ ಮಾಡಿಸಿಕೊಂಡ ಘಟನೆ ಕುಶಾಲನಗರ ಸಮೀಪ ಕೊಪ್ಪ ಗ್ರಾಮದಲ್ಲಿ ನಡೆದಿದೆ. ಕೊಪ್ಪ ಗ್ರಾಮದ ಟಿಬೇಟಿಯನ್ ಕ್ಯಾಂಪ್ ರಸ್ತೆಯಲ್ಲಿರುವ ಶುಂಠಿ ತೊಳೆಯುವ ಕೇಂದ್ರದ ಮಾಲೀಕನೊಬ್ಬ 10 ಮಂದಿ ಬಿಹಾರಿ ಕೂಲಿ ಕಾರ್ಮಿಕರನ್ನು ತನ್ನ ಘಟಕದಲ್ಲಿ ಕೆಲಸ ಮಾಡಿಸುತ್ತಿದ್ದ ಬಗ್ಗೆ ಮಾಹಿತಿ ದೊರೆತ ಗ್ರಾಪಂ ಅಧಿಕಾರಿಗಳು ಕ್ರಮಕೈಗೊಂಡಿದ್ದಾರೆ.

ಹೊರ ರಾಜ್ಯದಿಂದ ಶುಂಠಿ ತುಂಬಿಕೊಂಡು ಬಂದಿದ್ದ ಸಂದರ್ಭ ಈ ಕಾರ್ಮಿಕರನ್ನು ಮಾಲೀಕ ಬಳಸಿಕೊಂಡ ಮಾಹಿತಿ ತಿಳಿದ ಬೆನ್ನಲ್ಲೇ ಸ್ಥಳಕ್ಕೆ ಕಂದಾಯ ಅಧಿಕಾರಿಗಳು ಭೇಟಿ ನೀಡಿ ಮಾಲೀಕನ ಮೇಲೆ ಕ್ರಮಕೈಗೊಂಡಿ ದ್ದಾರೆ. ಕಾರ್ಮಿಕರನ್ನು ಮತ್ತೆ ಕ್ವಾರಂಟೈನ್‍ಗೆ ಒಳಪಡಿಸಿದ್ದು ಈ ಬಗ್ಗೆ ಮಾಲೀಕರ ಮೇಲೆ ಕಾನೂನು ಕ್ರಮಕೈಗೊಳ್ಳುವುದಾಗಿ ಸ್ಥಳೀಯ ಪಂಚಾಯ್ತಿ ಅಧಿಕಾರಿಗಳು ತಿಳಿಸಿದ್ದಾರೆ.