ಮಡಿಕೇರಿ, ಜು. 19: ಕೋವಿಡ್-19 ಸೋಂಕಿಲ್ಲದ ವ್ಯಕ್ತಿಗಳ ಪ್ರಯೋಗಾಲಯದ ಫಲಿತಾಂಶವನ್ನು ಎಸ್ಎಂಎಸ್ ಮುಖಾಂತರ ರವಾನಿಸುವ ಬಗ್ಗೆ ರಾಜ್ಯ ಸರಕಾರ ಸುತ್ತೋಲೆಯೊಂದಿಗೆ ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆಗೆ ಆದೇಶ ಹೊರಡಿಸಿದೆ.
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಉಲ್ಲೇಖಿತ ಸುತ್ತೋಲೆಯಲ್ಲಿ ನೀಡಿರುವ ಮಾರ್ಗಸೂಚಿಯಂತೆ ಎಲ್ಲಾ ಕೋವಿಡ್-19 ಪ್ರಯೋಗಾಲಯಗಳ ನೋಡಲ್ ಅಧಿಕಾರಿಗಳು ಕೋವಿಡ್-19 ಸೋಕಿಲ್ಲದ ವ್ಯಕ್ತಿಗಳ ಫಲಿತಾಂಶ ಬಂದಕೂಡಲೇ ಸಂಬಂಧಪಟ್ಟವರಿಗೆ ಈ ಕೆಳಕಂಡ ಮಾದರಿಯಲ್ಲಿ ಎಸ್.ಎಂ.ಎಸ್. ಮುಖಾಂತರ ಕನ್ನಡ ಮತ್ತು ಇಂಗ್ಲೀಷ್ ಭಾಷೆಯಲ್ಲಿ ರವಾನಿಸಲು ಸೂಚಿಸಿದೆ.
ಇಟಿgಟish: Sಖಈ Iಆ: ಘಿಙZ, ಖesuಟಣ: ಓegಚಿಣive. Iಜಿ ಥಿou ಜeveಟoಠಿ ಚಿಟಿಥಿ sಥಿmಠಿಣoms ಟiಞe ಜಿeveಡಿ, ಅough, ಃಡಿeಚಿಣhಟessಟಿess, ಅಚಿಟಟ ಖಿoಟಟ ಜಿಡಿee ಊeಟಠಿiಟಿes 14410 oಡಿ 104.
ಕನ್ನಡ: ಎಸ್.ಆರ್.ಎಫ್. ಐ.ಡಿ: ಎಕ್ಸ್ವೈಝಡ್. ಫಲಿತಾಂಶ: ಕೋವಿಡ್-19 ಸೋಂಕಿಲ್ಲ (ಓegಚಿಣive). ಜ್ವರ, ಕೆಮ್ಮು ಅಥವಾ ಉಸಿರಾಟ ತೊಂದರೆಯ ಲಕ್ಷಣಗಳು ಕಂಡುಬಂದಲ್ಲಿ, ಉಚಿತ ಸಹಾಯವಾಣಿ 14410 ಅಥವಾ 104ಗೆ ಕರೆಮಾಡಿ ಎಂದು ರಾಷ್ಟ್ರೀಯ ಆರೋಗ್ಯ ಅಭಿಯಾನ ನಿರ್ದೇಶಕಿ ಅರುಂಧತಿ ಸೂಚಿಸಿದರು.