ಗೋಣಿಕೊಪ್ಪ ವರದಿ, ಜು. 19: ಲಾಕ್‍ಡೌನ್ ನಡುವೆ ಸ್ಥಳೀಯ ಗ್ರಾಮ ಪಂಚಾಯಿತಿ ವತಿಯಿಂದ ಗೋಣಿಕೊಪ್ಪ ಪಟ್ಟಣದಲ್ಲಿ ಕೀಟನಾಶಕ ಸಿಂಪಡಣೆ ಮಾಡಲಾಯಿತು.

ವ್ಯಾಪ್ತಿಯ ಬಸ್ ನಿಲ್ದಾಣ, ವ್ಯಾಪಾರ ಪ್ರದೇಶಗಳಲ್ಲಿ ಸಿಂಪಡಣೆ ಮಾಡಲಾಯಿತು. ಪೊಲೀಸರು ಪಟ್ಟಣಕ್ಕೆ ಬರುವವರನ್ನು ತಡೆದು ವಿಚಾರಿಸುವ ಕಾರ್ಯ ಮಾಡಿದರು. ಇದರಿಂದಾಗಿ ಶನಿವಾರಕ್ಕಿಂತ ಹೆಚ್ಚಾಗಿ ಭಾನುವಾರ ನಿಯಂತ್ರಣ ಕಂಡುಬಂತು. ಜನರ ಓಡಾಟ ಇರಲಿಲ್ಲ. ತುರ್ತು ಅವಶ್ಯಕತೆಗಳಿಗಷ್ಟೆ ಜನರು ಪಟ್ಟಣಕ್ಕೆ ಬಂದರು.