ಕೂಡಿಗೆ, ಜು. 17: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾರಂಗಿಯಲ್ಲಿರುವ ಮೀನು ಮರಿ ಉತ್ಪಾದನಾ ಮತ್ತು ಪಾಲನಾ ಕೇಂದ್ರದ ವತಿಯಿಂದ ರೈತರಿಗೆ ಸರಕಾರ ನಿಗದಿ ಮಾಡಿದ ದರದಲ್ಲಿ ವಿತರಣೆ ಮಾಡಲಾಯಿತು.
ವಾರ್ಷಿಕ ಬಿತ್ತನೆ ಮರಿಗಳನ್ನು ರೈತರ ಬೇಡಿಕೆಯ ಆದ್ಯತೆಗೆ ಅನುಗುಣವಾಗಿ ಒಂದು ಲಕ್ಷ ಮೀನು ಮರಿಗಳನ್ನು ವಿತರಣೆ ಮಾಡಲಾಯಿತು. ಈ ಸಂದರ್ಭ ಹಾರಂಗಿ ಮೀನು ಮರಿ ಉತ್ಪಾದನಾ ಮತ್ತು ಪಾಲನಾ ಕೇಂದ್ರದ ಸಹಾಯಕ ನಿರ್ದೇಶಕ ಎಸ್.ಎಂ. ಸಚಿನ್, ಪೂನ್ನಂಪೇಟೆ ಸಹಾಯಕ ನಿರ್ದೇಶಕ ಮಹದೇವ ಸೇರಿದಂತೆ ಸಿಬ್ಬಂದಿ ವರ್ಗದವರು ಇದ್ದರು.