ಸೋಮವಾರಪೇಟೆ, ಜು. 17: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಮೂವರು ಸಂಚಾರಿ ನಿಯಂತ್ರಕರು ಮತ್ತು ಓರ್ವ ಚಾಲಕರಿಗೆ ಇಲ್ಲಿನ ಬಸ್ ನಿಲ್ದಾಣದ ಕಚೇರಿಯಲ್ಲಿ ಬೀಳ್ಕೊಡಲಾಯಿತು.
ಸೋಮವಾರಪೇಟೆ ನಿಲ್ದಾಣದ ಸಂಚಾರಿ ನಿಯಂತ್ರಕರಾದ ಅಜ್ಜಮಕ್ಕಡ ಯು. ಕಾರ್ಯಪ್ಪ, ಗೋಣಿಕೊಪ್ಪದ ಎ.ಬಿ. ತಿಮ್ಮಯ್ಯ, ಮಡಿಕೇರಿಯ ಎಸ್.ಎನ್. ಬೋರಯ್ಯ ಮತ್ತು ಮಡಿಕೇರಿ ಘಟಕದ ಚಾಲಕ ಹನೀಫ್ ಅವರುಗಳನ್ನು ಸನ್ಮಾನಿಸಿ ಬೀಳ್ಕೊಡಲಾಯಿತು.
ಕಾರ್ಯಕ್ರಮದಲ್ಲಿ ಮಡಿಕೇರಿ ಘಟಕದ ವ್ಯವಸ್ಥಾಪಕಿ ಗೀತಾ, ನಿವೃತ್ತ ಸಿಬ್ಬಂದಿಗಳ ಕುಟುಂಬಸ್ಥರು ಉಪಸ್ಥಿತರಿದ್ದರು.