ಮಡಿಕೇರಿ, ಜು. 17: ಕೊಡವ ಸಾಹಿತ್ಯದ ಮೇರು ಸಾಹಿತಿಗಳಾದ ಐ. ಮಾ. ಮುತ್ತಣ್ಣ ಹಾಗೂ ಬಿ.ಡಿ. ಗಣಪತಿಯವರ ಜನ್ಮ ಶತಮಾನೋತ್ಸವದ ಅಂಗವಾಗಿ ಕೊಡವಾಮೆರ ಕೊಂಡಾಟ ಕೂಟ ನಡೆಸುತ್ತಿರುವ ತಿಂಗಳಿಗೊಂದು ಸಾಹಿತ್ಯ ಸ್ಪರ್ಧೆಯ ಎರಡನೇ ಸ್ಪರ್ಧೆಯಾಗಿ ಕೊಡವ ಭಾಷೆಯ ಸಣ್ಣ ಕಥೆ ರಚನೆಯನ್ನು ಆಯೋಜಿಸಲಾಗಿದೆ. ಯಾವುದೇ ಜಾತಿ ಧರ್ಮ, ವಯಸ್ಸಿನ ಮಿತಿಯಿಲ್ಲದೇ ಪ್ರತಿಯೊಬ್ಬರೂ ಭಾಗವಹಿಸಬಹುದು. ಕಥೆಯು ಕೊಡವ ಭಾಷೆಯಲ್ಲೆ ಇದ್ದು 125 ಗೆರೆ ಮೀರದಂತೆ, ಸ್ಪಷ್ಟವಾಗಿ ಮುದ್ರಿತವಾಗಿರಬೇಕು, ಇಲ್ಲ ಕೈಬರಹದಲ್ಲಿರಬೇಕು. ತಮ್ಮ ಆಯ್ಕೆಯ ವಿಚಾರದ ಸ್ವರಚಿತ ಕಥೆಯಾ ಗಿರಬೇಕು, ಬೇರೆಲ್ಲೂ ಪ್ರಕಟವಾಗಿರಬಾರದು. ಕಥೆ ಬರೆದು ಕಳುಹಿಸಲು ತಾ. 25 ಕೊನೆಯ ದಿನವಾಗಿರುತ್ತದೆ. ವಿಜೇತರಿಗೆ ಪ್ರಥಮ ರೂ.2000 ದ್ವಿತೀಯ ರೂ. 1000 ಹಾಗೂ ತೃತೀಯ ರೂ. 500 ನಗದು ಹಾಗೂ ಅಭಿನಂದನಾ ಪತ್ರ ನೀಡಲಾಗುವುದು.
ಈ ಸ್ಪರ್ಧೆಯ ತಾ. 25ರ ಬಹುಮಾನವನ್ನು ಮಣವಟ್ಟಿರ ಜಯ ಬೆಳ್ಯಪ್ಪ ಅವರು ಪ್ರಾಯೋಜಿಸಿದ್ದು, ಸ್ಫರ್ದೆಗೆ ಕಥೆ ಕಳುಹಿಸುವವರು ರಾತ್ರಿ 10 ಗಂಟೆಯ ಒಳಗೆ ಸ್ಪರ್ಧಾ ಸಂಚಾಲಕಿ ಮೂವೆರ ರೇಖಾ ಪ್ರಕಾಶ್ ಅವರ ವಾಟ್ಸಾಪ್ ಸಂಖ್ಯೆ 9591645748 ಗೆ ಕಳುಹಿಸಬೇಕು. ಸ್ಪರ್ಧೆಯಲ್ಲಿ ಭಾಗವಹಿಸಿ, ಹಿರಿಯ ಸಾಹಿತಿಗಳಿಗೆ ಗೌರವ ಸಲ್ಲಿಸಲು ಸಹಕರಿಸಬೇಕೆಂದು ಕೊಡವಾಮೆರ ಕೊಂಡಾಟ ಸಂಸ್ಥೆಯ ಅಧ್ಯಕ್ಷ ಚಾಮೆರ ದಿನೇಶ್ ಬೆಳ್ಯಪ್ಪ ಅವರು ಕೋರಿದ್ದಾರೆ.