*ಸಿದ್ದಾಪುರ, ಜು. 17: ಕಾಡಾನೆಗಳ ಹಿಂಡು ದಾಳಿ ಮಾಡಿ ಹಾನಿಪಡಿಸಿದ ಅಭ್ಯತ್‍ಮಂಗಲ ಮತ್ತು ಒಂಟಿಯಂಗಡಿ ಪ್ರದೇಶಗಳಿಗೆ ವನಪಾಲಕ ಕೂಡಕಂಡಿ ಸುಬ್ರಾಯ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲಿಸಿದರು. ಅಂಚೆಮನೆ ಕುಟುಂಬದ ತೋಟ ಮತ್ತು ಗ್ರೀನ್ ನರ್ಸರಿಯನ್ನು ಕಾಡಾನೆಗಳು ಧ್ವಂಸಗೊಳಿಸಿದ್ದವು.

ಕೃಷಿ ನಷ್ಟಕ್ಕೆ ಸಂಬಂಧಿಸಿದಂತೆ ಅರ್ಜಿಯನ್ನು ಸಲ್ಲಿಸಿದರೆ ಇಲಾಖೆ ಪರಿಹಾರ ನೀಡಲಿದೆ ಎಂದು ಅರಣ್ಯಾಧಿಕಾರಿಗಳು ಗ್ರಾಮಸ್ಥರಿಗೆ ಭರವಸೆ ನೀಡಿದರು.