ಮಡಿಕೇರಿ, ಜು. 17: ಜಿಲ್ಲೆಯಲ್ಲಿ ತಾ.17 ರಂದು ಹೊಸದಾಗಿ 16 ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಜಿಲ್ಲೆಯಲ್ಲಿ ಇದುವರೆಗೆ 255 ಪ್ರಕರಣಗಳು ಪತ್ತೆಯಾಗಿದ್ದು, ಇದರಲ್ಲಿ 155 ಮಂದಿ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ ಹಾಗೂ 4 ಮಂದಿ ಸಾವನ್ನಪ್ಪಿದ್ದಾರೆ. ಪ್ರಸ್ತುತ 96 ಪ್ರಕರಣಗಳು ಸಕ್ರಿಯವಾಗಿವೆ. ಜಿಲ್ಲೆಯಾದ್ಯಂತ ಒಟ್ಟು 105 ನಿಯಂತ್ರಿತ ಪ್ರದೇಶಗಳಿವೆ.

16 ಪ್ರಕರಣಗಳ ವಿವರ ಮರಗೋಡಿನ ಶಿವ ಪಾರ್ವತಿ ದೇವಸ್ಥಾನ ಬಳಿಯ ನಿವಾಸಿಗಳಾದ 39 ವರ್ಷದ ಪುರುಷ, 35 ವರ್ಷದ ಮಹಿಳೆ, 5 ವರ್ಷದ ಹುಡುಗ, 24 ವರ್ಷದ ಮಹಿಳೆ ಮತ್ತು 2 ವರ್ಷದ ಹೆಣ್ಣು ಮಗುವಿಗೆ ಸೋಂಕು ದೃಡÀsÀಪಟ್ಟಿದೆ. ಬೆಂಗಳೂರಿನ ಕೊರೊನಾ ಸೋಂಕಿತರ ಪ್ರಾಥಮಿಕ ಸಂಪರ್ಕದಿಂದ ಇವರುಗಳಿಗೆ ಸೋಂಕು ತಗುಲಿದೆ. ಮೂರ್ನಾಡಿನ ಮುತ್ತಾರ್‍ಮುಡಿ ಗ್ರಾಮದ 40 ವರ್ಷದ ಪುರುಷ, 23 ವರ್ಷದ ಪುರುಷ ಹಾಗೂ 50 ವರ್ಷದ ಪುರುಷರು ಬೆಂಗಳೂರಿನಿಂದ ಇತ್ತೀಚೆಗೆ ಹಿಂತಿರುಗಿದ್ದರು. ಇವರುಗಳಿಗೆ ಕೊರೊನಾ ‘ಪಾಸಿಟಿವ್’ ವರದಿಯಾಗಿವೆ. ಪೆÇನ್ನಂಪೇಟೆ ಮೈತ್ರಿನಗರದ 57 ವರ್ಷದ ಮಹಿಳೆ, ದೋಬಿ ಕಾಲೊನಿಯ 46 ವರ್ಷ ವಯಸ್ಸಿನ ಪುರುಷರಿಗೆ ಸೋಂಕು ದೃಢಪಟ್ಟಿದೆ. ಸೋಮವಾರಪೇಟೆಯ ಅಭ್ಯತ್‍ಮಂಗಲದ ಜ್ಯೋತಿನಗರದ 55 ವರ್ಷ ವಯಸ್ಸಿನ ಪುರುಷನಿಗೂ ಸೋಂಕು ತಗುಲಿದೆ. ಶನಿವಾರಸಂತೆ ಕಾವೇರಿ ಶಾಲೆಯ ಸಮೀಪದ ನಿವಾಸಿ, 39 ವರ್ಷದ ಪುರುಷನಿಗೆ

ಹಾಗೂ ಬಸವನಹಳ್ಳಿಯ 28 ವರ್ಷದ ಮಹಿಳೆ, ಬೆಂಗಳೂರಿನಿಂದ ಹಿಂತಿರುಗಿದ್ದು ಅವರಿಗೂ ಸೋಂಕು ದೃಢವಾಗಿದೆ. ಕೊಡ್ಲಿಪೇಟೆ ಊರುಗುತ್ತಿಯ 68 ವರ್ಷದ ಪುರುಷ, ಮನುಗನಹಳ್ಳಿಯ 38 ವರ್ಷದ ಪುರುಷ, ಮಾದಾಪುರ ಜಂಬೂರು ಬಾಣೆಯ 26 ವರ್ಷದ ಮಹಿಳೆ, ಆರೋಗ್ಯ ಕಾರ್ಯಕರ್ತೆಗೆ ಸೋಂಕು ದೃಢಪಟ್ಟಿದೆ.

ಹೊಸ ನಿಯಂತ್ರಿತ ಪ್ರದೇಶಗಳು

ಮರಗೋಡಿನ ಶಿವ ಪಾರ್ವತಿ ದೇವಸ್ಥಾನ, ಮುತ್ತಾರ್ಮುಡಿ ಗ್ರಾಮ , ಪೆÇನ್ನಂಪೇಟೆಯ ಮೈತ್ರಿನಗರ ಹಾಗೂ ದೋಬಿ ಕಾಲೊನಿ, ಅಭ್ಯತ್‍ಮಂಗಲದ ಜ್ಯೋತಿನಗರ ಗ್ರಾಮ , ಶನಿವಾರಸಂತೆಯ ಕಾವೇರಿ ಶಾಲೆಯ ಹತ್ತಿರ, ಸೋಮವಾರಪೇಟೆಯ ಬಸವನಹಳ್ಳಿ, ಜಂಬೂರು ಬಾಣೆ.

4 ನಿಯಂತ್ರಿತ ವಲಯಗಳನ್ನು ಸಾರ್ವಜನಿಕರಿಗೆ ಮುಕ್ತಗೊಳಿಸಲಾಗಿದೆ: ಮಡಿಕೇರಿಯ ಭಗವತಿನಗರ, ಚಾಮುಂಡೇಶ್ವರಿ ನಗರ ಹೆಬ್ಬೆಟ್ಟಗೇರಿ ಹಾಗೂ ಮಹದೇವಪೇಟೆ.