ಮಡಿಕೇರಿ, ಜು. 17: ಮಡಿಕೇರಿಯಲ್ಲಿ ಸೀಲ್ ಡೌನ್ ಆದ ಮಹದೇವಪೇಟೆ ಮತ್ತು ಭಗವತಿನಗರದ ಕುಟುಂಬಗಳಿಗೆ ಕೊಡಗು ಜಿಲ್ಲಾ ಕಾಂಗ್ರೆಸ್ ನೆರವು ನೀಡಿದೆ.
ಭಗವತಿನಗರದ ಸ್ಥಳೀಯರಾದ ಸುಂದರ್ ಮತ್ತು ಶ್ರೀಧರ್ ಅಲ್ಲಿಯ ಜನರ ಸಂಕಷ್ಟವನ್ನು ಕೊಡಗು ಜಿಲ್ಲಾ ಕಾಂಗ್ರೆಸ್ ಖಜಾಂಚಿ ಹೆಚ್.ಎಂ ನಂದಕುಮಾರ್ ಅವರಿಗೆ ತಿಳಿಸಿದ ಮೇರೆಗೆ ನಂದಕುಮಾರ್ ಪ್ರಾಯೋಜಕತ್ವ ದಲ್ಲಿ ದಿನಸಿ ಕಿಟ್ ಅನ್ನು ಕಾಂಗ್ರೆಸ್ ಮುಖಂಡರು ವಿತರಿಸಿದರು .
ಈ ಸಂದರ್ಭದಲ್ಲಿ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ಅಧ್ಯಕ್ಷ ತೆನ್ನೀರಾ ಮೈನಾ, ನಗರ ಸಭಾ ಮಾಜಿ ಸದಸ್ಯ Àಪ್ರಕಾಶ್ ಆಚಾರ್ಯ, ಸೇವಾದಳದ ಅಧ್ಯಕ್ಷ ಕಾನೆಹಿತ್ಲು ಮೊಣ್ಣಪ್ಪ, ನಗರ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಭುರೈ ಇದ್ದರು.