*ಸಿದ್ದಾಪುರ, ಜು. 16: ಇಲ್ಲಿಗೆ ಸಮೀಪದ ಅಭ್ಯತ್‍ಮಂಗಲ ಗ್ರಾಮ ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿ ಮಿತಿ ಮೀರಿದೆ. ಪ್ರತಿ ದಿನ ಕಾಡಾನೆಗಳು ತೋಟ, ಗದ್ದೆಗಳಿಗೆ ಲಗ್ಗೆಯಿಡುತ್ತಿವೆ. ನಿನ್ನೆ ರಾತ್ರಿ ಕಾಡಾನೆಗಳು ಅಲ್ಲಿನ ಒಂಟಿಯಂಗಡಿಯಲ್ಲಿರುವ ಗ್ರೀನ್ ನರ್ಸರಿ ಹಿಂಭಾಗದಲ್ಲಿರುವ ಬಾಳೆ ಗಿಡಗಳನ್ನು ಧ್ವಂಸಗೊಳಿಸಿ ಮುಂದೆ ಸಾಗುವಾಗ ನರ್ಸರಿ ಗಿಡಗಳನ್ನು ತುಳಿದು ನಾಶಪಡಿಸಿದೆ. ಅಲ್ಲದೆ ಸನಿಹದಲ್ಲಿರುವ ಅಂಚೆಮನೆ ಕುಟುಂಬಸ್ಥರ ಬಾಳೆ ತೋಟಕ್ಕೆ ದಾಳಿ ಮಾಡಿ ನಾಶ ಪಡಿಸಿವೆ.