ಮಡಿಕೇರಿ, ಜು. 15: ಕೊಡಗಿನಲ್ಲಿ ಗುಡ್ಡ ಪ್ರದೇಶದಲ್ಲಿ ಕಟ್ಟಡ ನಿರ್ಮಿಸುವ ಮೊದಲು ಭೂ ವಿಜ್ಞಾನಿಗಳನ್ನು ಸಂಪರ್ಕಿಸುವುದು ಒಳಿತು ಎಂಬ ಸಲಹೆ ನೀಡಿದ್ದೇನೆ ಹೊರತು ಈ ಬಗ್ಗೆ ಸರಕಾರ ಯಾವದೇ ಆದೇಶ ಮಾಡಿರುವದಿಲ್ಲ ಎಂದು ಜಿಲ್ಲಾ ವಿಪತ್ತು ನಿರ್ವಹಣಾಧಿಕಾರಿಯಾದ ಅನನ್ಯ ವಾಸುದೇವ್ ಅವರು ‘ಶಕ್ತಿ’ಗೆ ಸ್ಪಷ್ಟಪಡಿಸಿದ್ದಾರೆ.