ಅರ್ವತೋಕ್ಲು ವಿದ್ಯಾನಿಕೇತನ ಪದವಿಪೂರ್ವ ಕಾಲೇಜು: ಗೋಣಿಕೊಪ್ಪ ಸಮೀಪದ ಅರ್ವತೋಕ್ಲು ವಿದ್ಯಾನಿಕೇತನ ಪದವಿಪೂರ್ವ ಕಾಲೇಜು ಶೇ. 100 ಫಲಿತಾಂಶ ಪಡೆದುಕೊಂಡಿದೆ. ಪರೀಕ್ಷೆ ಬರೆದಿದ್ದ ಒಟ್ಟು 239 ವಿದ್ಯಾರ್ಥಿಗಳಲ್ಲಿ ಎಲ್ಲರೂ ತೇರ್ಗಡೆಯಾಗಿದ್ದಾರೆ.
ವಿಜ್ಞಾನ ವಿಭಾಗದಲ್ಲಿ ಎ.ಯು. ರಂಜನಾ 589 ಅಂಕ ಪಡೆದಿದ್ದಾರೆ. ಮೃನಾಲಿನಿ ತಮನ್ಕರ್ 587 ಅಂಕ ಪಡೆದಿದ್ದಾರೆ. ಕೆ. ಯುಕ್ತಾ ಕಾವೇರಪ್ಪ 582 ಅಂಕ ಪಡೆದು ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನಗಳಿಸಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ ಸಿ.ಎಸ್. ಸಫೀನಾ 571 ಅಂಕ ಪಡೆದಿದ್ದಾರೆ. ಎಂ.ಕೆ. ತಿಮ್ಮಯ್ಯ 569 ಅಂಕ ಪಡೆದಿದ್ದಾರೆ. ಕೆ.ಪಿ. ದಿವಿನ್ 561 ಅಂಕ ಪಡೆದು ವಾಣಿಜ್ಯ ವಿಭಾಗದಲ್ಲಿ ಕಾಲೇಜಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನಗಳಿಸಿದ್ದಾರೆ.
ಕೂಡಿಗೆ: ಕೂಡಿಗೆ ಸರಕಾರಿ ಪದವಿಪೂರ್ವ ಕಾಲೇಜಿಗೆ ವಿಜ್ಞಾನ ವಿಭಾಗದಲ್ಲಿ ಶೇ. 94.28 ಫಲಿತಾಂಶ ದೊರೆತಿದೆ. ವಿಜ್ಞಾನ ವಿಭಾಗದಲ್ಲಿ ಸಿ. ಚಂದು (ಶೇ. 95.51), ಹೆಚ್.ಎ. ಅನ್ಸಿಲಾ (ಶೇ. 94.16) ಹಾಗೂ ಸಿ.ಹೆಚ್. ಪಂಚಮಿ (ಶೇ. 91.16) ಗಳಿಸಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದಿದ್ದಾರೆ.
ಕಲಾ ವಿಭಾಗದಲ್ಲಿ ಕಾಲೇಜಿಗೆ ಶೇ. 85.38 ದೊರೆತಿದೆ. ಸಿ.ಎಸ್. ದರ್ಶನ್ (522), ಸಿ.ಪಿ. ಸುದೀಪ್ (516), ಡಿ.ಎಸ್. ಭೂಮಿಕಾ (507) ಅಂಕಗಳಿಸಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನಗಳಿಸಿದ್ದಾರೆ.
ಆಲೂರು-ಸಿದ್ದಾಪುರ: ಶನಿವಾರಸಂತೆ ವಿಘ್ನೇಶ್ವರ ಬಾಲಕಿಯರ ಪ.ಪೂ. ಕಾಲೇಜಿಗೆ ಶೇ. 92 ಫಲಿತಾಂಶ ಲಭಿಸಿದೆ. ಕಾಮರ್ಸ್‍ನಲ್ಲಿ ಶೇ. 90.61, ಆಟ್ರ್ಸ್‍ನಲ್ಲಿ ಶೇ. 87.17 ಫಲಿತಾಂಶ ಲಭಿಸಿದೆ. ಆಟ್ರ್ಸ್ ವಿಭಾಗದ ವಿದ್ಯಾರ್ಥಿನಿ ಎನ್.ಎಸ್. ಲಕ್ಷ್ಮಿ 600 ಕ್ಕೆ 537 (ಶೇ. 89.83) ಅಂಕ ಪಡೆದುಕೊಂಡು ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿರುತ್ತಾರೆ. ಕಾಮರ್ಸ್ ವಿಭಾಗದ ವಿದ್ಯಾರ್ಥಿನಿಯರು ಎಸ್.ನಿ. ನಿಶ್ಚಿತ 600ಕ್ಕೆ 564 (ಶೇ. 94), ಸಿ.ವಿ. ಸೃಷ್ಠಿ 600ಕ್ಕೆ 564 (ಶೇ. 94), ಸಮೀರ 600ಕ್ಕೆ 564 (ಶೇ. 94) ಅಂಕಗಳಿಸಿ ಪ್ರಥಮ ಸ್ಥಾನ ಹಂಚಿಕೊಂಡಿದ್ದಾರೆ.
ಜವಾಹರ್ ನವೋದಯ ವಿದ್ಯಾಲಯ: ಮಡಿಕೇರಿಯ ಜವಾಹರ್ ನವೋದಯ ವಿದ್ಯಾಲಯದ ವಿದ್ಯಾರ್ಥಿ ಪೊನ್ನಂಪೇಟೆಯ ದುದ್ದಿಯಂಡ ಎಂ. ಮೊಹಮ್ಮದ್ ಜ್ಹಿಯಾನ್ ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಪಿಸಿಎಂಬಿ ವಿಭಾಗದಲ್ಲಿ ಶೇ. 94.6 ಅಂಕ ಪಡೆದು ಜವಾಹರ್ ನವೋದಯ ವಿದ್ಯಾಲಯದಲ್ಲಿ ಪ್ರಥಮ ಸ್ಥಾನದೊಂದಿಗೆ ತೇರ್ಗಡೆಯಾಗಿದ್ದಾರೆ.
ಅರಮೇರಿ ಎಸ್‍ಎಂಎಸ್ ಪಿಯು ಕಾಲೇಜು: ಅರಮೇರಿಯ ಎಸ್‍ಎಂಎಸ್ ಪಿಯು ಕಾಲೇಜು ಶೇ. 100 ಫಲಿತಾಂಶ ಪಡೆದುಕೊಂಡಿದೆ.
ಮಾದಾಪುರ ಚೆನ್ನಮ್ಮ ಪದವಿಪೂರ್ವ ಕಾಲೇಜು: ಮಾದಾಪುರ ಚೆನ್ನಮ್ಮ ಪದವಿಪೂರ್ವ ಕಾಲೇಜು ಶೇ. 88.33, ವಾಣಿಜ್ಯ ವಿಭಾಗದಲ್ಲಿ ಹಾಗೂ ಕಲಾ ವಿಭಾಗದಲ್ಲಿ ಶೇ. 87.5 ಪಡೆದುಕೊಂಡಿದೆ.
ಸಂತಮೇರಿ ಪದವಿಪೂರ್ವ ಕಾಲೇಜು: ಸುಂಟಿಕೊಪ್ಪದ ಸಂತಮೇರಿ ಪದವಿಪೂರ್ವ ಕಾಲೇಜಿಗೆ ಶೇ. 100 ಫಲಿತಾಂಶ ಲಭಿಸಿದೆ. ಕಾಲೇಜಿನ ಎಸ್.ಎಂ. ಶಾಜಿದ ಶೇ. 92.83 ಫಲಿತಾಂಶದೊಂದಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ.
ಕಿರಿಕೊಡ್ಲಿ ಮಠದ ಸದಾಶಿವ ಸ್ವಾಮಿ ಪಿ.ಯು. ಕಾಲೇಜು: ಕೊಡ್ಲಿಪೇಟೆ ಸಮೀಪದ ಕಿರಿಕೊಡ್ಲಿ ಮಠದ ಸದಾಶಿವ ಸ್ವಾಮಿ ಪದವಿಪೂರ್ವ ಕಾಲೇಜಿಗೆ ಶೇ. 98 ಫಲಿತಾಂಶ ಲಭಿಸಿದೆ. ವಿದ್ಯಾರ್ಥಿನಿಯರಾದ ವಿ.ಆರ್. ಬೃಂದಾ ಶೇ. 95 (569), ಬಿ.ಆರ್. ಕಾವ್ಯಾ ಶೇ. 95 (568), ಹೆಚ್.ಎಂ. ಮಶ್ರುಫಾ ಶೇ. 92 (550) ಅಂಕ ಪಡೆದು ಕಾಲೇಜಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನಗಳಿಸಿದ್ದಾರೆ.