ಕೂಡಿಗೆ, ಜು. 15: ಹಾರಂಗಿ ಅಣೆಕಟ್ಟೆ ಸಮೀಪದಲ್ಲಿರುವ ಜಲ ವಿದ್ಯುತ್ ಯೋಜನೆ ಘಟಕದಲ್ಲಿ ಇಂದಿನಿಂದ ಎರಡು ಮಿಲಿಯನ್ ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಕಾರ್ಯ ಪ್ರಾರಂಭವಾಗಿದೆ.
ಅಣೆಕಟ್ಟೆಯಲ್ಲಿ ನೀರಿನ ಮಟ್ಟವನ್ನು ಕಾಯ್ದಿರಿಸಿಕೊಂಡು ಅಣೆಕಟ್ಟೆಗೆ ಬರುವ ಒಳಹರಿವಿನ ನೀರಿನ ಪ್ರಮಾಣದಲ್ಲಿ ಶೇ. 40 ಭಾಗವನ್ನು ನದಿಗೆ ಹರಿಸಲು ತೀರ್ಮಾನ ಕೈಗೊಂಡ ಹಿನ್ನೆಲೆಯಲ್ಲಿ ಹಾರಂಗಿ ಅಣೆಕಟ್ಟೆಯಿಂದ 400 ಕ್ಯೂಸೆಕ್ ನೀರನ್ನು ವಿದ್ಯುತ್ ಘಟಕದ ಮೂಲಕ ಹರಿಸಲಾಗುತ್ತಿದೆ. ಆ ನೀರು ವಿದ್ಯುತ್ ಘಟಕದ ಮೂಲಕ ನದಿಗೆ ಬರುವುದರಿಂದ ವಿದ್ಯುತ್ ಘಟಕದ ಕಾರ್ಯ ಪ್ರಾರಂಭವಾಗಿ ವಿದ್ಯುತ್ ಉತ್ಪಾದನೆ ಆರಂಭವಾಗಿದೆ.
ವಿದ್ಯುತ್ ಘಟಕದಲ್ಲಿ ಉತ್ಪಾದನೆ ಮಾಡಲಾದ ವಿದ್ಯುತ್ ಅನ್ನು ಕುಶಾಲನಗರದಲ್ಲಿರುವ ವಿದ್ಯುತ್ಕೇಂದ್ರಕ್ಕೆ ನೀಡಲಾಗುತ್ತಿದೆ . ಈ ಘಟಕದಲ್ಲಿ ಒಂದು ಗಂಟೆಗೆ ಎರಡು ಸಾವಿರ ಯೂನಿಟ್ ವಿದ್ಯುತ್ ಉತ್ಪತ್ತಿಯಾಗುತ್ತಿದೆ. ಇದುವರೆಗೆ ಈ ಕೇಂದ್ರದಲ್ಲಿ ಕೇವಲ 19 ಮಿಲಿಯನ್ ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಲು ಸಾಧ್ಯವಾಗುತ್ತಿತ್ತು. ಇದೀಗ ಎರಡು ಕೇಂದ್ರ ಗಳಲ್ಲಿ ಸರಾಸರಿ 30 ಮಿಲಿಯನ್ ಯೂನಿಟ್ ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ಸಾಮಥ್ರ್ಯ ಈ ಕೇಂದ್ರಕ್ಕೆ ಇದೆ.