ಸುಂಟಿಕೊಪ್ಪ, ಜು. 13: ಸುಂಟಿಕೊಪ್ಪ ಹೋಬಳಿ ಕೊಡಗರ ಹಳ್ಳಿ ಗ್ರಾಮ ಪಂಚಾಯಿತಿಯ ಕೂರ್ಗಳ್ಳಿ ತೋಟದ ಯುವತಿಯೊಬ್ಬಳಿಗೆ ಕೊರೊನಾ ಸೋಂಕು ದೃಢಪಟ್ಟಿದೆ ಈ ಯುವತಿ ಹೊರರಾಜ್ಯವಾದ ಆಂಧ್ರ ಪ್ರದೇಶದಲ್ಲಿ ನರ್ಸ್ ತರಬೇತಿ ಪಡೆಯುತ್ತಿದ್ದು, ಕೆಲವು ದಿನಗಳ ಹಿಂದೆ ಕೂರ್ಗಳ್ಳ್ಳಿ ಲೈನ್ ಮನೆಗೆ ಆಗಮಿಸಿದ್ದಳು.

ಅನಾರೋಗ್ಯ ಕಾರಣ ಗಂಟಲ ದ್ರವ ಪರೀಕ್ಷೆ ನಡೆಸಿದ್ದು ಇದೀಗ ಸೊಂೀಕು ದೃಢಪಟ್ಟ್ಟಿದ್ದು ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಪಡಿಸಲಾಗಿದೆ. ಈ ಸಂಬಂಧ ಜಿಲ್ಲಾಡಳಿತ ವತಿಯಿಂದ ಕಂದಾಯ ಪರಿವೀಕ್ಷಕ ಶಿವಪ್ಪ, ಆರೋಗ್ಯ ಸಹಾಯಕಿಯರು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗಿರೀಶ್, ಕಾರ್ಯದರ್ಶಿ ಸುಕುಮಾರ್, ನೋಡಲ್ ಅಧಿಕಾರಿ ನೆಹರು, ಗ್ರಾಮ ಲೆಕ್ಕಿಗರಾದ ರೂಪಶ್ರೀ, ನಸೀಮ, ದೇವೇಗೌಡ, ಹಾಗೂ ಪೊಲೀಸ್ ಸಿಬ್ಬಂದಿ, ಪಂಚಾಯಿತಿ ಸಿಬ್ಬಂದಿಗಳು ತೋಟದ ಲೈನ್ ಮನೆಗೆ ತೆರಳಿ 9 ಮನೆಗಳ 32 ಜನ ಇರುವ ಪ್ರದೇಶವನ್ನು ಸೀಲ್‍ಡೌನ್ ಮಾಡಿದರು.

ಈ ಪ್ರದೇಶದಿಂದ ಯಾರು ಹೊರಬರಬಾರದು, ಹೊರಗಿನಿಂದ ಯಾರೂ ಒಳಗೆ ತೆರಳಬಾರದು ರೋಗ ಉಲ್ಬಣಗೊಳ್ಳುವ ಸಾಧ್ಯತೆ ಇದೆ ಎಂದು ಕಟ್ಟೆಚ್ಚರ ನೀಡಲಾಯಿತು. ಸೋಂಕು ತಗುಲಿದ ಮನೆಯವರಿಗೆ ಧೈರ್ಯ ತುಂಬಿ ಸರಕಾರದಿಂದ ಚಿಕಿತ್ಸೆ ಇನ್ನಿತರ ನೆರವನ್ನು ನೀಡಲಾಗುವುದು ಎಂದು ಕಂದಾಯ ಪರಿವೀಕ್ಷಕ ಶಿವಪ್ಪ ಹೇಳಿದರು. ಪಂಚಾಯಿತಿ ವತಿಯಿಂದ ಈ ಪ್ರದೇಶಕ್ಕೆ ರೋಗ ನಿರೋಧಕ ಮದ್ದು ಸಿಂಪಡಿಸಲಾಯಿತು.