ಸುಂಟಿಕೊಪ್ಪ, ಜು. 15: ಸುಂಟಿಕೊಪ್ಪದಲ್ಲಿ ಕೋವಿಡ್ 3 ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು ಜಿಲ್ಲಾಡಳಿತದ ಆದೇಶ ಮೇರೆ ಅಪ್ಪಾರಂಡ ಬಡಾವಣೆ ಹಾಗೂ ಎಮ್ಮೆಗುಂಡಿ ರಸ್ತೆಯ ಶಿವರಾಂ ರೈ ಬಡಾವಣೆ ರಸ್ತೆ ಸೀಲ್‍ಡೌನ್ ಮಾಡಲಾಗಿದೆ. ಆದರೆ ಈ ಭಾಗದ ಕೆಲ ನಿವಾಸಿಗಳು ಹೊರಬಂದು ಪಟ್ಟಣದಲ್ಲಿ ಸುತ್ತಾಡುತ್ತಿರುವುದು ಕಂಡು ಬಂದಿದ್ದು, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.