ಗೋಣಿಕೊಪ್ಪ ವರದಿ, ಜು. 15 : ದೇವರಪುರ ಲೈನ್‍ಮನೆಯಲ್ಲಿ ವಾಸವಿದ್ದ ಸುಮಿತ್ರ (29) ಜೂನ್ 19 ರಿಂದ ಕಾಣೆಯಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಈಕೆ ಆಸ್ಪತ್ರೆಗೆ ಹೋಗುತ್ತೇನೆ ಎಂದು ಪತಿ ಆನಂದನಿಂದ ಹಣ ಪಡೆದು ತೆರಳಿದ್ದಳು. ಕೆಲಸಕ್ಕೆ ಹೋಗಿ ಮನೆಗೆ ಬಂದಾಗ ಪತ್ನಿ ಮನೆಯಲ್ಲಿ ಇರಲಿಲ್ಲ ಎಂದು ಪತಿ ಆನಂದ ದೂರಿನಲ್ಲಿ ತಿಳಿಸಿದ್ದಾರೆ. ಸುಮಾರು 4.5 ಅಡಿ ಎತ್ತರವಿದ್ದಾರೆ. ಎಣ್ಣೆಗೆಂಪು ಬಣ್ಣ, ಕೋಲುಮುಖ ಹೊಂದಿದ್ದಾರೆ. ಕನ್ನಡ, ತುಳು ಭಾಷೆ ತಿಳಿದಿದೆ. ಪತ್ತೆಯಾದವರು 08274 247333 ಸಂಖ್ಯೆಗೆ ಮಾಹಿತಿ ನೀಡಬಹುದಾಗಿದೆ ಎಂದು ಗೋಣಿಕೊಪ್ಪ ಪೊಲೀಸ್ ಠಾಣೆ ಪ್ರಕಟಣೆ ತಿಳಿಸಿದೆ.