ಕೂಡಿಗೆ, ಜು. 15; ಕೂಡಿಗೆಯ ಸರ್ಕಲ್ ಮತ್ತು ಆಸುಪಾಸಿನ ವರ್ತಕರು ಸಭೆ ಸೇರಿ ಮಧ್ಯಾಹ್ನ ಎರಡು ಗಂಟೆಗಳ ನಂತರ ಬಂದ್ ಮಾಡುವ ಬಗ್ಗೆ ತೀರ್ಮಾನ ಕೈಗೊಂಡಂತೆ ಕೂಡಿಗೆಯ ಎಲ್ಲಾ ಅಂಗಡಿ ಮುಂಗಟ್ಟು ಸಂಪೂರ್ಣವಾಗಿ ಬಂದ್ ಆಗಿದ್ದವು.

ಈ ವ್ಯಾಪ್ತಿಯ ಎಲ್ಲಾ ಆಟೋ ಚಾಲಕರು, ಮಾಲೀಕರು, ವಿವಿಧ ಅಂಗಡಿ ಮಾಲೀಕರು, ತರಕಾರಿ ಅಂಗಡಿಗಳು ಮತ್ತು ಮಾಂಸದ ಅಂಗಡಿಗಳು ಸೇರಿದಂತೆ ಎಲ್ಲರೂ ಸ್ವಯಂ ಪೇರಿತರಾಗಿ ಬಂದ್ ಮಾಡಿದ್ದರು.