ಸಿದ್ದಾಪುರ, ಜು. 15: ಮನೆಯೊಳಗೆ ಇದ್ದ ವಿಷಪೂರಿತ ಎರಡು ಹಾವುಗಳನ್ನು ಸೆರೆಹಿಡಿಯುವಲ್ಲಿ ಸುರೇಶ್ ಪೂಜಾರಿ ಯಶಸ್ವಿಯಾಗಿದ್ದಾರೆ. ಸಿದ್ದಾಪುರ ಹೈಸ್ಕೂಲ್ ರಸ್ತೆಯಲ್ಲಿರುವ ರಾಧಾ ಎಂಬವರ ಮನೆಯ ಒಳಗಿದ್ದ 2 ವಿಷಪೂರಿತ ಹಾವುಗಳನ್ನು ಉರಗ ಪ್ರೇಮಿ ಸುರೇಶ್ ಪೂಜಾರಿ ಸೆರೆ ಹಿಡಿದು ಸಮೀಪದ ಅರಣ್ಯಕ್ಕೆ ಬಿಟ್ಟಿರುತ್ತಾರೆ. ಈಗಾಗಲೇ ಸುರೇಶ್ 350ಕ್ಕೂ ಅಧಿಕ ಹಾವುಗಳನ್ನು ಹಿಡಿದಿದ್ದಾರೆ. ಹಾವುಗಳನ್ನು ಕಂಡಲ್ಲಿ ಮೊಬೈಲ್ ಸಂಖ್ಯೆ 8277131863 ಸಂಪರ್ಕಿಸುವಂತೆ ಸುರೇಶ್ ತಿಳಿಸಿದ್ದಾರೆ.