ವೀರಾಜಪೇಟೆ, ಜು.13: ವೀರಾಜಪೇಟೆ ಪ.ಪಂ. ವತಿಯಿಂದ ಕೊರೊನಾ ವೈರಸ್‍ನ ಮುಂಜಾಗರೂ ಕ್ರಮವಾಗಿ ನಿನ್ನೆ ದಿನ ಇಲ್ಲಿನ ಮುಖ್ಯ ರಸ್ತೆ ಸೇರಿದಂತೆ ಪಟ್ಟಣದ ವಿವಿಧೆಡೆಗಳಲ್ಲಿ ರೋಗ ನಿರೋಧಕ ಔಷಧಿಯನ್ನು ಟ್ಯಾಂಕರ್‍ನಲ್ಲಿ ಸಿಂಪಡಿಸಲಾಯಿತು. ಇಲ್ಲಿನ ಪ.ಪಂ. ಆರೋಗ್ಯ ವಿಭಾಗದ ಅಧಿಕಾರಿಗಳು ಸಿಬ್ಬಂದಿಗಳು ಪಾಲ್ಗೊಂಡಿದ್ದರು.