ವೀರಾಜಪೇಟೆ, ಜು. 14: ವೀರಾಜಪೇಟೆ ವಿಭಾಗದ ವೀರಾಜಪೇಟೆ ಅರಣ್ಯ ವಲಯದ ವ್ಯಾಪ್ತಿಗೆ ಒಳಪಡುವ ಕೊಳತ್ತೋಡು ಬೈಗೋಡು, ನಲ್ವತೋಕ್ಲು, ಹೊಸಕೋಟೆ, ಕಳತ್ಮಾಡು, ಗೊಟ್ಟಡ, ಹೊಸೂರು, ಬೆಟ್ಟಗೇರಿ ಗ್ರಾಮಗಳಲ್ಲಿ ಬೀಡುಬಿಟ್ಟಿರುವ ಕಾಡಾನೆಗಳನ್ನು ಕಾಡಿಗೆ ಅಟ್ಟುವ ಕಾರ್ಯಾಚರಣೆಯನ್ನು ತಾ. 16 ರಂದು ಕೈಗೊಳ್ಳಲಿದ್ದು, ಸದರಿ ಈ ಮೇಲಿನ ಗ್ರಾಮದ ಸುತ್ತಮುತ್ತಲಿನ ಗ್ರಾಮಸ್ಥರು, ತೋಟದ ಕಾರ್ಮಿಕರು ಎಚ್ಚರಿಕೆಯಿಂದ ಇದ್ದು, ಇಲಾಖಾ ಕಾರ್ಯಾಚರಣೆಗೆ ಸಹಕರಿಸಿಬೇಕೆಂದು ವೀರಾಜಪೇಟೆ ವಲಯ ಅರಣ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.