ಕಡಂಗ, ಜು. 14: ಜಿಲ್ಲೆಯ ಹಲವು ಕಡೆಗಳಲ್ಲಿ ಕೋವಿಡ್-19 ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದರ ಮೂಲಕ ಕಾರ್ಯಾಚರಿಸುತ್ತಿರುವ ಕೊಡಗು ಸಾಂತ್ವನ ವಿಭಾಗಕ್ಕೆ ಜಿಲ್ಲೆಯ ಎಸ್.ಎಸ್.ಎಫ್. ಕಾರ್ಯಕರ್ತರಿಂದ ಜಿಲ್ಲಾ ಹೆಲ್ಪ್ ಡೆಸ್ಕ್ ಸಂಗ್ರಹಿಸಿದ ಮೊತ್ತವನ್ನು ಜಿಲ್ಲಾ ಸಾಂತ್ವನ ವಿಭಾಗದ ಚೇರ್ಮನ್ ಸಯ್ಯಿದ್ ಇಲ್ಯಾಸ್ ತಙÐಳ್ ಅವರಿಗೆ ಹಸ್ತಾಂತರಿಸಲಾಯಿತು.

ಮರ್ಕಝುಲ್ ಹಿದಾಯ ಕೊಟ್ಟಮುಡಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಸ್.ವೈ.ಎಸ್. ಜಿಲ್ಲಾಧ್ಯಕ್ಷ ಅಬ್ದುಲ್ಲಾ ಸಖಾಫಿ ಕೊಳಕೇರಿ, ಮರ್ಕಝ್ ಮ್ಯಾನೇಜರ್ ಇಸ್ಮಾಯಿಲ್ ಸಖಾಫಿ ಕೊಂಡಂಗೇರಿ, ಎಸ್.ವೈ.ಎಸ್. ಇಸಾಬ ಕಣ್ವೀನರ್ ಅಬೂಬಕರ್ ಕಡಂಗ, ಎಸ್.ಎಸ್.ಎಫ್. ಜಿಲ್ಲಾಧ್ಯಕ್ಷ ಅಬ್ದುಲ್ ಅಝೀಝ್ ಸಖಾಫಿ ಕೊಡ್ಲಿಪೇಟೆ, ಉಪಾಧ್ಯಕ್ಷ ಶಾಫಿ ಸಅದಿ ಸೋಮವಾರಪೇಟೆ, ಶರೀಫ್ ಹೊಸತೋಟ, ಅಸ್ಕರ್ ಸಖಾಫಿ, ರಫೀಖ್ ಲತೀಫಿ, ಝುಬೈರ್ ಸಅದಿ, ಹಂಝ ರಹ್ಮಾನಿ, ರಾಶಿದ್ ಮಾಲ್ದಾರೆ ಹಾಜರಿದ್ದರು. - ನೌಫಲ್