ಗೋಣಿಕೊಪ್ಪ ವರದಿ, ಜು. 13 : ಪೊನ್ನಂಪೇಟೆ ಇಗ್ಗುತ್ತಪ್ಪ ಸೌಹಾರ್ದ ಕ್ರೆಡಿಟ್ ಕೋಪರೇಟಿವ್ ಲಿಮಿಟೆಡ್ ವತಿಯಿಂದ ಆಶಾ ಕಾರ್ಯಕರ್ತೆಯರಾದ ಶೋಭಾ, ಬಿ. ಆರ್. ಯಶೋಧ, ಕೆ. ಪಿ. ಸರಸ್ವತಿ ಅವರುಗಳಿಗೆ ಶುಕ್ರವಾರ ತಲಾ 3 ಸಾವಿರ ಸಹಾಯಧನ ವಿತರಿಸಿ ಗೌರವಿಸಲಾಯಿತು. ಇಗ್ಗುತ್ತಪ್ಪ ಸೌಹಾದರ್À ಕ್ರೆಡಿಟ್ ಕೋ ಆಪರೇಟಿವ್ ಲಿಮಿಟೆಡ್ ಅಧ್ಯಕ್ಷ ಮದ್ರೀರ ಕೆ. ಸೋಮಯ್ಯ, ನಿರ್ದೇಶಕರಾದ ಐನಂಡ ಕೆ. ಮಂದಣ್ಣ, ಮುದ್ದಿಯಡ ಪ್ರಕಾಶ್, ಸಹಕಾರ ಸಂಘಗಳ ಅಭಿವೃದ್ಧಿ ಅಧಿಕಾರಿ ಮೇಕೇರಿರ ಎಸ್. ಮೋಹನ್ , ಆಡಳಿತ ಮಂಡಳಿ ಸದಸ್ಯರು, ಸಿಬ್ಬಂದಿ ಉಪಸ್ಥಿತರಿದ್ದರು.