ಮಡಿಕೇರಿ, ಜು. 13: ಕೇಂದ್ರ ಸರ್ಕಾರದಿಂದ ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮುಖಾಂತರ ಅನುಷ್ಠಾನಗೊಳಿಸ ಲಾಗುತ್ತಿರುವ ‘ಸಖಿ ಒನ್ ಸ್ಟಾಪ್ ಸೆಂಟರ್’ಗೆ ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಹೊರಗುತ್ತಿಗೆ ಮೂಲಕ ನೇಮಕಾತಿ ಮಾಡಲು ಬಾಹ್ಯಮೂಲ/ ಹೊರಗುತ್ತಿಗೆ ಆಧಾರ ದಲ್ಲಿ ಅರ್ಹ ಮಹಿಳಾ ಅಭ್ಯರ್ಥಿ ಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಸ್ವಚ್ಛತಾಗಾರರು, ರಕ್ಷಕರು (ಮಹಿಳಾ ಅಭ್ಯರ್ಥಿಗೆ ಮೀಸಲು):- ಹುದ್ದೆಗಳ ಸಂಖ್ಯೆ: 1, ಸ್ವಚ್ಛತಾಗಾರರು/ ರಕ್ಷಕರಾಗಿ ಕನಿಷ್ಟ 3 ವರ್ಷ ಕೆಲಸ ಮಾಡಿದ ಅನುಭವ ಹೊಂದಿರಬೇಕು. ಸ್ಥಳೀಯ ಅಭ್ಯರ್ಥಿಯಾಗಿರಬೇಕು. ವಯೋಮಿತಿ 45 ವರ್ಷದೊಳಗಿರ ಬೇಕು. ಮಾಸಿಕ ಗೌರವಧನ ರೂ.15 ಸಾವಿರ ಆಗಿರಬೇಕು. ‘ಸಖಿ ಒನ್ ಸ್ಟಾಪ್ ಸೆಂಟರ್’ಗಳಲ್ಲಿ ನೇಮಕವಾಗುವ ಸಿಬ್ಬಂದಿಗಳು 24x7 ಕಾರ್ಯನಿರ್ವ ಹಿಸಲು ಅನುವಾಗುವಂತೆ ವಿವಿಧ ಪಾಳಿಗಳಲ್ಲಿ ಕಡ್ಡಾಯವಾಗಿ ಕಾರ್ಯ ನಿರ್ವಹಿಸಬೇಕು. ತಾ. 16 ಕೊನೇ ದಿನವಾಗಿದೆ. ಮಾಹಿತಿಗೆ ಉಪ ನಿರ್ದೇಶಕರ ಕಚೇರಿ, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಡಿಕೇರಿ ಇಲ್ಲಿಯ ದೂರವಾಣಿ ಸಂಖ್ಯೆ: 08272 298379 ಅನ್ನು ಕಚೇರಿ ವೇಳೆಯಲ್ಲಿ ಸಂಪರ್ಕಿಸ ಬಹುದಾಗಿದೆ ಎಂದು ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಾದ ಅರುಂಧತಿ ತಿಳಿಸಿದ್ದಾರೆ.