ಮಡಿಕೇರಿ, ಜು. 14: ವೀರಾಜಪೇಟೆ ತಾಲೂಕಿನ ಆರ್ಜಿ ಗ್ರಾಮದ ಕಿರುಮಕ್ಕಿಯಲ್ಲಿ ಹುಲಿ ದಾಳಿ ನಡೆಸಿ ಹಸುವೊಂದನ್ನು ಕೊಂದು ಹಾಕಿದೆ. ಅಲ್ಲಿನ ನಿವಾಸಿ ಹೆಚ್. ಟಿ. ಕಿಶೋರ್ ಎಂಬವರಿಗೆ ಸೇರಿದ ಹಸುವನ್ನು ಹುಲಿ ಕೊಂದು ಹಾಕಿದೆ. ಸ್ಥಳಕ್ಕೆ ಡಿಎಫ್‍ಓ ರೋಶ್ನಿ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇದೇ ಸಂದರ್ಭ ಹಸುವನ್ನು ಕಳೆದುಕೊಂಡ ಕಿಶೋರ್ ಅವರಿಗೆ ಪರಿಹಾರ ಮೊತ್ತದ ಚೆಕ್ ನೀಡಲಾಯಿತು. ಸ್ಥಳದಲ್ಲಿ ಸಿ.ಸಿ. ಕ್ಯಾಮರಾ ಅಳವಡಿಸಲಾಗಿದ್ದು, ಹುಲಿಯ ಚಲನವಲನಗಳನ್ನು ಗಮನಿಸಲಾಗುವದು. ಹುಲಿ ಸೆರೆಗೆ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಅನುಮತಿಗೆ ಕೋರಲಾಗುವದು, ಅನುಮತಿ ದೊರೆತಲ್ಲಿ ಹುಲಿ ಸೆರೆಗೆ ಕಾರ್ಯಾಚರಣೆ ನಡೆಸಲಾಗುವದೆಂದು ಡಿಎಫ್‍ಓ ರೋಶ್ನಿ ತಿಳಿಸಿದ್ದಾರೆ.