ಸುಂಟಿಕೊಪ್ಪ, ಜು. 13: ಸುಂಟಿಕೊಪ್ಪ ಪಟ್ಟಣದಲ್ಲಿ ಕೊರೊನಾ ಸೋಂಕಿತರು ಪತ್ತೆಯಾಗುತ್ತಿದ್ದಂತೆ ಬಡಾವಣೆಗಳು ಸೀಲ್‍ಡೌನ್ ಆಗುತ್ತಿರುವುದನ್ನು ಗಮನಿಸಿದ ವಿವಿಧ ಸಂಘ ಸಂಸ್ಥೆ ಹಾಗೂ ಜನಪ್ರತಿನಿಧಿಗಳು ಒಮ್ಮತದಿಂದ ಕೊರೊನಾ ಸೋಂಕು ನಿಯಂತ್ರಿಸುವ ದಿಸೆಯಲ್ಲಿ ವಾಹನ ಸಂಚಾರ ಹಾಗೂ ವ್ಯಾಪಾರ ವಹಿವಾಟನ್ನು ಮಂಗಳವಾರ ದಿಂದ ಶನಿವಾರದವರೆಗೆ ಸಂಪೂರ್ಣ ಸ್ಥಗಿತಗೊಳಿಸುವಂತೆ ತೀರ್ಮಾನ ಕೈಗೊಂಡಿದ್ದಾರೆ. ಸುಂಟಿಕೊಪ್ಪದ 2 ಬಡಾವಣೆಗಳು ಸೀಲ್‍ಡೌನ್‍ಗೊಂಡಿದ್ದು ಸ್ಥಳೀಯ ಜನತೆಯಲ್ಲಿ ಅತಂಕ ಮೂಡಿಸಿದೆ. ಇದರಿಂದ ಜನಪ್ರತಿನಿಧಿಗಳು ಹಾಗೂ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಸಾರ್ವಜನಿಕರ ತುರ್ತು ಸಭೆಯನ್ನು ಆಯೋಜಿಸಲಾಗಿತ್ತು. ಸಭೆಯಲ್ಲಿ ಜಿ.ಪಂ. ಸದಸ್ಯ ಪಿ.ಎಂ.ಲತೀಪ್, ತಾ.ಪಂ.ಸದಸ್ಯೆ ವಿಮಾಲಾವತಿ, ಗ್ರಾ.ಪಂ. ಉಪಾಧ್ಯಕ್ಷ ಪಿ.ಆರ್.ಸುಕುಮಾರ್, ಕನ್ನಡ ಸಾಹಿತ್ಯ ಪರೀಷತ್ ಅಧ್ಯಕ್ಷ ಎಂ.ಎಸ್ .ಸುನೀಲ್, ಮಾಜಿ ಉಪಾಧ್ಯಕ್ಷ ಬಿ.ಕೆ. ಮೋಹನ್ ನೇತೃತ್ವದಲ್ಲಿ ಸಭೆ ನಡೆಸಿ ಊರಿನ ಆರೋಗ್ಯದ ಹಿತದೃಷ್ಟಿಯಿಂದ ತಾ. 14 ರಿಂದ (ಇಂದಿನಿಂದ) ಶನಿವಾರದವರೆಗೆ ಬೆಳಿಗ್ಗೆ 6 ರಿಂದ 8 ಗಂಟೆವರೆಗೆ ಹಾಲು, ದಿನಪತ್ರಿಕೆ, ದಿನಸಿ ಸಾಮಗ್ರಿಗಳ ವ್ಯಾಪಾರ ವಹಿವಾಟು ನಡೆಸಿ ನಂತರ ಸಂಪೂರ್ಣ ಬಂದ್ ನಡೆಸುವಂತೆ ನಿರ್ಣಯಿಸಲಾಯಿತು.ಈ ಸಂದರ್ಭ ವರ್ಕ್‍ಶಾಪ್ ಸಂಘದ ಅಧ್ಯಕ್ಷ ವಿ.ಎ. ಸಂತೋಷ್, ಮಾಜಿ ಕಾರ್ಯದರ್ಶಿ ಪಿ.ಆರ್. ಸುನಿಲ್ ಕುಮಾರ್, ಸದಸ್ಯ ಕೆ.ಇ. ಕರೀಂ, ಮಾಜಿ ಅಧ್ಯಕ್ಷೆ ಬಿ.ಐ. ಭವಾನಿ, ಧನು ಕಾವೇರಪ್ಪ, (ಮೊದಲ ಪುಟದಿಂದ) ಅಂಬೇಡ್ಕರ್ ಸಂಘದ ಅಧ್ಯಕ್ಷ ಎಂ.ಎಸ್. ರವಿ, ಆರ್. ಶಾಂತರಾಂ ಕಾಮತ್ ಮತ್ತಿತರರು ಇದ್ದರು.

ಕುಶಾಲನಗರದಲ್ಲಿ ಮೂರು ದಿನ ಬಂದ್

ಕುಶಾಲನಗರದಲ್ಲಿ ಬುಧವಾರ, ಗುರುವಾರ, ಶುಕ್ರವಾರ ಮೂರು ದಿನಗಳಕಾಲ ವ್ಯಾಪಾರ ವಹಿವಾಟು ಸ್ವಯಂಪ್ರೇರಿತ ಬಂದ್ ಗೆ ಸ್ಥಳೀಯ ಛೇಂಬರ್ ಆಫ್ ಕಾಮರ್ಸ್ ತೀರ್ಮಾನಿಸಿದೆ.

ಕುಶಾಲನಗರದ ಕನ್ನಿಕಾ ಸಭಾಂಗಣದಲ್ಲಿ ಚೇಂಬರ್ ಆಫ್ ಕಾಮರ್ಸ್ ಸ್ಥಾನೀಯ ಸಮಿತಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು

ಬೆಳಗ್ಗೆ 6 ರಿಂದ 8 ಗಂಟೆ ತನಕ ಹಾಲು, ತರಕಾರಿ, ಬೇಕರಿ, ಮೀನು-ಮಾಂಸ,ಮೆಡಿಕಲ್ಸ್ ಗೆ ಎರಡು ಗಂಟೆಗಳ ಕಾಲ ಮಾತ್ರ ವ್ಯಾಪಾರಕ್ಕೆ ಅವಕಾಶ ಕಲ್ಪಿಸಲಾಗಿದೆ.

ಕುಶಾಲನಗರದ ವಿವಿಧ ಸಂಘಸಂಸ್ಥೆಗಳ ಪ್ರಮುಖರ ಸಭೆಯಲ್ಲಿ ಅಭಿಪ್ರಾಯ ಸಂಗ್ರಹಿಸಿ ಸ್ವಯಂಪ್ರೇರಿತ ಬಂದ್ ಗೆ ನಿರ್ಣಯ ಕೈಗೊಳ್ಳ ಲಾಯಿತು. ನಾಗರಿಕರು ಸಹಕರಿಸಿ ಕೊರೊನಾ ನಿಯಂತ್ರಣಕ್ಕೆ ಕೈಜೋಡಿಸ ಬೇಕೆಂದು ಚೇಂಬರ್ ಅಧ್ಯಕ್ಷ ಬಿ.ಅಮೃತ್ ರಾಜ್ ಮತ್ತು ಪ್ರಮುಖರು ಮನವಿ ಮಾಡಿದ್ದಾರೆ. ಸಭೆಯಲ್ಲಿ ಚೇಂಬರ್ ಆಫ್ ಕಾಮರ್ಸ್ ಸಮಿತಿ ಪ್ರಮುಖರಾದ ರವೀಂದ್ರ ರೈ, ಬಿ.ಆರ್.ನಾಗೇಂದ್ರ ಪ್ರಸಾದ್, ಎಂ.ಡಿ.ರಂಗಸ್ವಾಮಿ, ವಿವಿಧ ಸಂಘಸಂಸ್ಥೆಗಳ ಪ್ರಮುಖರು ಇದ್ದರು.