ಮಡಿಕೇರಿ ಮಂಗಳಾದೇವಿನಗರ ನಿವಾಸಿ ಹೆಚ್. ದೊರೆರಾಜು (ಪಾಪು) ಪ್ರವಾಸೋದ್ಯಮ ಇಲಾಖೆ ಉದ್ಯೋಗಿ (51) ಅವರು ತಾ. 13 ರಂದು ನಿಧನರಾದರು. ಅಂತ್ಯಕ್ರಿಯೆ ತಾ. 14 ರಂದು (ಇಂದು) ಬೆಳಿಗ್ಗೆ 11.30ಕ್ಕೆ ಚೈನ್‍ಗೇಟ್‍ನ ಹಿಂದೂ ರುದ್ರಭೂಮಿ ಯಲ್ಲಿ ನಡೆಯಲಿದೆ. ಮೃತರು ಈರ್ವರು ಪುತ್ರರನ್ನು ಅಗಲಿದ್ದಾರೆ.

*ಸೋಮವಾರಪೇಟೆ ಸಮೀಪದ ಗೆಜ್ಜೆಹಣಕೋಡು ಗ್ರಾಮದ ನಿವಾಸಿ ಕಮಲಮ್ಮ (87) ತಾ. 13 ರಂದು ನಿಧನ ಹೊಂದಿದ್ದಾರೆ. ಮೃತರ ಅಂತ್ಯಕ್ರಿಯೆ ತಾ. 14 ರಂದು (ಇಂದು) ನಡೆಯಲಿದೆ. ಮೃತರು ನಾಲ್ವರು ಪುತ್ರರು ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.