ಸಂಗಮ ದುರವಸ್ಥೆ ಸರಿಪಡಿಸಲು ಆಗ್ರಹ

ತಾ. 8 ರ ‘ಶಕ್ತಿ’ಯಲ್ಲಿ ಪ್ರಕಟಗೊಂಡ ‘ಭಾಗಮಂಡಲ ಸಂಗಮ ಕಾಮಗಾರಿಯ ದುರವಸ್ಥೆ’ ಎಂದು ಪ್ರಧಾನ ಸಂಪಾದಕ ಜಿ. ರಾಜೇಂದ್ರ ಅವರು ಬರೆದ ಸಂಪಾದಕೀಯಕ್ಕೆ ಜನತೆ ಸ್ಪಂದಿಸಿದ್ದಾರೆ. ಕಾಮಗಾರಿಯನ್ನು ಸಮರ್ಪಕಗೊಳಿಸಲು ಆಗ್ರಹಿಸಿದ್ದಾರೆ.

ಮಾನ್ಯರೆ, ಹಣ ಸಂಪಾದನೆಯೊಂದೇ ಗುರಿಯಾಗದಿರಲಿ. ಮಾತೆ ಕಾವೇರಿಯ ಕ್ಷೇತ್ರದಲ್ಲಿ ಶ್ರದ್ಧೆಯಿಂದ ಸೇವೆಗೈಯಲಿ.

- ಇ.ಕೆ. ತಿಮ್ಮಪ್ಪ ಕಾಂತಪ್ಪ, ನಾಪೋಕ್ಲು.

ಮಾನ್ಯರೆ, ನಿಜವಾಗಿ ಹೌದು. ನಾವು ಸ್ಥಳಕ್ಕೆ ತೆರಳಿ ನೋಡಿದಾಗ ಇದೇ ವಾಸ್ತವ ಅಂಶಗಳು ಕಂಡುಬಂದಿವೆ. ಈ ಬಗ್ಗೆ ಕೆಲವು ಹಿರಿಯರು ಕೂಡ ಮಾಹಿತಿ ನೀಡಿದ್ದು, ಅಸಮರ್ಪಕ ಕಾಮಗಾರಿಯಾಗಿದ್ದು ಸ್ಪಷ್ಟಗೊಂಡಿದೆ. ಇದರ ಪರಿಶೀಲನೆ ಮತ್ತು ತನಿಖೆಗೆ ಕ್ರಮ ಕೈಗೊಳ್ಳಬೇಕು.

- ಎಂ.ಎನ್. ಚಂದ್ರಮೋಹನ್.

ಮಾನ್ಯರೆ, ಕೆಸರಿನ ಕಾರಣ ನಾನು ಸಂಗಮದಲ್ಲಿ ಜಾರಿದ್ದೆ. ನೀರಿನ ಮಟ್ಟ ಸೊಂಟಕ್ಕಿಂತ ಮೇಲೆ ಇತ್ತು. ಕಾವೇರಮ್ಮನ ಆಶೀರ್ವಾದವಿತ್ತು.

ನೀರಿನ ಮಟ್ಟ ಜಾಸ್ತಿ ಯಾದಾಗ ಅನಾಹುತವಾಗಿದೆ. ಮಳೆಗಾಲದ ಪ್ರವಾಹದ ನೀರು ಕಳೆದ ನಂತರ ಪರೀಕ್ಷಿಸಿ. ಗುಂಡಿ ಉಳಿದುಕೊಂಡಿದ್ದರೆ ಸಮತಟ್ಟು ಮಾಡಬೇಕು. ಮಣ್ಣು ಹಾಗೂ ಕೆಸರಿದ್ದರೆ ತೆಗೆದು ಮರಳನ್ನು ದೂಡಿ ಸಮತಟ್ಟು ಮಾಡುವುದು ಸೂಕ್ತ.

- ರಾಜೇಶ್ ಕೆದಂಬಾಡಿ.

ಉತ್ತಮ ಚಿತ್ರಣದ ಬರಹ: - ಮನೆಯಪಂಡ ಅಯ್ಯಪ್ಪ ಪೊನ್ನಪ್ಪ.

ಅಧಿಕಾರ ಕೈಗೆ ಸಿಕ್ಕಿದರೆ ಆಯುಧ ಹಿಡಿದು ಬೆದರಿಸುವವರೇ ಹೆಚ್ಚು. ನಿಮ್ಮ ಲೇಖನಿಯ ಪರಿಣಾಮ ತನಿಖೆ ನಡೆಯಲಿ.

- ಮುತ್ತಣ್ಣ, ಅಪ್ಪಚ್ಚು.

ಅಧಿಕಾರಿಗಳ ನಿರ್ಲಕ್ಷ್ಯ ಒಂದು ಜೀವವನ್ನು ಬಲಿ ತೆಗೆದುಕೊಂಡಿದೆ. ನಿಮ್ಮ ಎಚ್ಚರಿಕೆಯನ್ನು ಕಡೆಗಣಿಸಿದರೆ ಇನ್ನಷ್ಟು ಜೀವ ಬಲಿಯಾಗುವ ಮುನ್ನೆಚ್ಚರಿಕೆಯಿರಲಿ. ನಿಮ್ಮ ಸಾಮಾಜಿಕ ಕಳಕಳಿಯ ಈ ಬರಹಕ್ಕಾಗಿ ಧನ್ಯವಾದಗಳು. ನೀವು, ನಿಮ್ಮ ಪತ್ರಿಕೆ ಸಮಾಜಮುಖಿ ಎನ್ನುವುದಕ್ಕೆ ಇದು ಸಾಕ್ಷಿ.

- ವಿಲ್‍ಫ್ರೆಡ್ ಕ್ರಾಸ್ತ.

ಕಾವೇರಿಯ ಉಪನದಿ ಕನ್ನಿಕೆಯ ದಡದಲ್ಲು ಇದೇ ರೀತಿಯ ಗೋಳು. ಮಳೆನೀರು ಎತ್ತರಪ್ರದೇಶದಿಂದ ಹರಿದು ಬಂದು ನದಿ ಸೇರುವ ಕಡೆ ಜೆ.ಸಿ.ಬಿ. ಮೂಲಕ ಟನ್‍ಗಟ್ಟಲೆ ಮಣ್ಣು ರಾಶಿ ಹಾಕಲಾಗಿದೆ. ಇನ್ನು ಮಳೆಯ ಪ್ರಮಾಣ ಜಾಸ್ತಿಯಾದರೆ ಏನು ಗತಿ ಎನ್ನುವುದನ್ನು ಭಗಂಡೇಶ್ವರನೇ ಬಲ್ಲ! ಅದಕ್ಕೆ ಸಂಬಂಧಪಟ್ಟ ಗುತ್ತಿಗೆದಾರರನ್ನು ಕೇಳಿದರೆ ಕೋರ್ಟ್ ಆದೇಶದಂತೆ ಕೆಲಸ ಮಾಡುತ್ತಿದ್ದೇವೆ ಎನ್ನುತ್ತಾರೆ. ನದಿ ತಟದ ನಿವಾಸಿಗಳಿಗೆ ದೇವರೇ ಗತಿ.

- ಶಿವಪ್ರಸಾದ್, ಮೊಗೆರು ಗೋವಿಂದ್.

ಸಂಗಮ ಸುಗಮಗೊಳ್ಳಲು ತುರ್ತು ಗಮನಿಸಲಿ

ಮಾನ್ಯರೆ, ತಾ. 6 ರ ‘ಶಕ್ತಿ’ಯಲ್ಲಿ ಪ್ರಧಾನ ಸಂಪಾದಕ ಜಿ. ರಾಜೇಂದ್ರ ಅವರು ‘ಭಾಗಮಂಡಲ ಸಂಗಮ ಕಾಮಗಾರಿಯ ದುರವಸ್ಥೆ’ಯ ಬಗ್ಗೆ ಬರೆದಿರುವ ಸಂಪಾದಕೀಯ ಜಿಲ್ಲಾಡಳಿತಕ್ಕೊಂದು ಎಚ್ಚರಿಕೆಯ ಘಂಟಾನಾದ.

ಭಾಗಮಂಡಲ ಸಂಗಮದಲ್ಲಿ ಹುಣಸೂರಿನ ವ್ಯಕ್ತಿಯೊಬ್ಬರು ಮುಳುಗಿ ಸಾವಿಗೀಡಾದ ದುರಂತದ ಕುರಿತಂತೆ ಜಿಲ್ಲಾಡಳಿತದ ಜವಾಬ್ದಾರಿಯೂ ಇದ್ದು, ದೇವಸ್ಥಾನದ ಆಡಳಿತ ಮಂಡಳಿಯವರ ಬೇಜವಾಬ್ದಾರಿ ಸಂಗಮ ಕಾಮಗಾರಿಯ ಹಿನ್ನೆಲೆಯಲ್ಲಿ ಎದ್ದು ಕಾಣುವಂತಿದೆ. ಈ ಕಾಮಗಾರಿಯನ್ನು ನಡೆಸಿರುವ ನಿರ್ಮಿತಿ ಕೇಂದ್ರ ಕೂಡ ತನ್ನ ಬೇಜವಾಬ್ದಾರಿಯನ್ನು ಇಲ್ಲಿ ಪ್ರದರ್ಶಿಸಿದಂತಿದೆ.

ಇಂತಹ ಹಲವು ಪ್ರಕರಣಗಳು ಈ ಹಿಂದೆಯೂ ಕಂಡುಬಂದಿದೆ. ಇಂತಹ ಸಂದರ್ಭದಲ್ಲಿ ‘ಶಕ್ತಿ’ ಈ ಕುರಿತಂತೆ ಭಾಗಮಂಡಲ ಸಂಗಮ ಕಾಮಗಾರಿಯ ಹಿನ್ನೆಲೆಯಲ್ಲಿ ಬೆಳಕು ಚೆಲ್ಲಿರುವುದು ಜನಪ್ರತಿನಿಧಿಗಳು ಇದೀಗ ಜಾಗೃತರಾಗುವಂತೆ ಮಾಡಿರುವುದು ಒಂದು ಶುಭ ಸೂಚನೆ.

ಇನ್ನು ಭಾಗಮಂಡಲ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಕೂಡ ಸಾರ್ವಜನಿಕ ಮೂಲದ ಸರಕಾರಿ ಹಣವನ್ನು ಯಥೇಚ್ಛವಾಗಿ ವೆಚ್ಚ ಮಾಡುತ್ತಾ ಕಾವೇರಿ ತಾಯಿಗೆ ಧಾರೆ ಎರೆಯುತ್ತಿದೆ! ದೇವಸ್ಥಾನ ಸಮಿತಿಯವರು ಮಾಡಿದ ಕಾಮಗಾರಿ ಕುರಿತಾದ ವಿವರಗಳು ಹಾಗೂ ನಿರ್ಮಿತಿ ಕೇಂದ್ರದ ಮೂಲಕ ವೆಚ್ಚವಾದ ಹಣಕಾಸಿನ ವಿವರವಾದ ‘ಶ್ವೇತಪತ್ರ’ವನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡುವಂತಾಗಬೇಕು. ಈ ಸಂದರ್ಭ ಜಿಲ್ಲಾಡಳಿತ ಕೂಡಲೇ ಗಮನಹರಿಸಬೇಕು.

ಪುರಾಣ ಪ್ರಸಿದ್ಧ ಕಾವೇರಿಯ ಮಡಿಲು ಇಂತಹ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಕಲ್ಮಶವಾಗದಂತೆ ಕ್ಷೇತ್ರದ ಪ್ರಜ್ಞಾವಂತ ನಾಗರಿಕರು ಕೂಡ ತಡೆಯೊಡ್ಡುವಂತಾಗಬೇಕು.

‘ಶಕ್ತಿ’ಯು ಸಂಗಮ ಕಾಮಗಾರಿಯ ದುರವಸ್ಥೆಯ ಬಗ್ಗೆ ಬೆಳಕು ಚೆಲ್ಲಿದೆ. ಈ ಬೆಳಕು ಆರದಂತೆ ಸಾರ್ವಜನಿಕರು ಸರಕಾರಕ್ಕೆ ಒತ್ತಡ ಹೇರುವಂತಾಗಬೇಕೆಂಬುದೇ ಹಾರೈಕೆ-ಹರಕೆ.

- ಬೈ.ಶ್ರೀ. ಪ್ರಕಾಶ್, ಮಡಿಕೇರಿ.

ಸಂಪಾದಕೀಯದ ಅಭಿಪ್ರಾಯವನ್ನು ಬೆಂಬಲಿಸಿದವರು

ವೆಂಕಿಸೂರಿ, ಬೆಂಗಳೂರಿನ ಬಿ.ಜಿ. ರವಿಕುಮಾರ್, ಎಂ.ಸಿ.ರಾಜು, ಲಲಿತ ಎಂ.ಕೆ. ಲಾಲಿ, ನರಸಿಂಹರಾಜ್ ದೇಸಾಯಿ, ಪ್ರಶಾಂತ್ ಭಟ್, ಸಂದೀಪ್ ಶಿವತ್ತಾಯ, ಮಲ್ಲೇಶ್ ತಲಕಾವೇರಿ, ಎಸ್.ಎಸ್. ಸಂಪತ್‍ಕುಮಾರ್ ಭಾಗಮಂಡಲ, ಪ್ರದೀಪ್ ಮರಗೋಡು, ಅಜಿತ್ ಕೊಟ್ಟಕೇರಿಯನ, ಮೋನಿಷ್‍ಕುಮಾರ್, ಕೆ.ವಿ. ಪರಮೇಶ್, ಕಾಣತಿಲ್ ಎಂ. ರಾಣಿ ಅರುಣ್, ಮಯೂರ ಶರ್ಮ, ಗಿರಿಧರ್ ಶ್ರೀಪತಿ ಕೇಕುಣ್ಣಾಯ, ವಿಘ್ನೇಶ್ ರಾವ್, ಸುಧಾಕರ್ ಕೂರ್ಗ್, ಬಾಬು ಹೆಚ್.ಎಸ್. ಹೆಬ್ಬಾರ್, ರಮೇಶ್ ಹೊಳ್ಳ, ಇಳಾ ನವೀನ್, ಮಂಜುನಾಥ್ ಗುಂಡೂರಾವ್, ಮಹದೇವ ಸ್ವಾಮಿ, ಪಿ. ಅನಂತರಾಜ ಗೌಡ ಪುತ್ತೂರ್, ಚಂದ್ರಶೇಖರ್ ಭಟ್, ರಾಧಾಕೃಷ್ಣ ಕಣ್ಣಾರಾಯ, ರವೀಶ್ ಕೇಕುಣ್ಣಾಯ, ಅಕ್ಷಯ್ ಗೌಡ, ಮನೋಹರ್ ಬಂಗಾರ್ ಕೋಡಿ, ಕೃಷ್ಣಮೂರ್ತಿ ಶಗರಿತ್ತಾಯ, ಸುರೇಶ್ ಬಿಳಿಗೇರಿ, ದಿವ್ಯಾ ಮಂದಿರ, ಸುಧಾಕರ್ ಆಚಾರ್, ಜೀವನ್ ಬೆಳ್ಳಮನೆ, ವಿನೋದ್ ಕೆ.ಪಿ; ನೌಷದ್ ಜನ್ನತ್, ಅನಿಲ್ ಕುದ್ರೆತ್ತಾಯ ಗೋಪಾಲ್, ಸೋಮು ಭೀಮರಾವ್, ಚಂದ್ರಶೇಖರ್ ಕೆ.ಪಿ., ಗೌತಮ್ ಅಚ್ಚಯ್ಯ ನೆರವಂಡ, ಕಾಂಚನ ಗೌಡ, ಪ್ರಭಾಕರ್ ಕೇಕುಣ್ಣಾಯ, ಪಾಸ್‍ಕಲ್ ಡಿಸೋಜ, ಜಯಲಕ್ಷ್ಮಿ ಶೇಖರ್, ಮನು ರಾಜೀವ್, ಲಲಿತ ನಂದಕುಮಾರ್.