ಗೋಣಿಕೊಪ್ಪ, ಜು. 12: ವಜಾ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯವು ತೀರ್ಪು ನೀಡಿದ್ದು ಅಡ್ಡಂಡ ಅನಿತಾ ಪರವಾಗಿ ತೀರ್ಪು ಹೊರಬಿದ್ದಿದೆ.ಪೆÇನ್ನಂಪೇಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಹಿಂದಿನ ಸಾಲಿನ ಆಡಳಿತ ಮಂಡಳಿಯ ಅಡ್ಡಂಡ ಜನಾರ್ಧನ (ಡಾಲಿ) ಅಧ್ಯಕ್ಷತೆಯ ಆಡಳಿತ ಮಂಡಳಿ ದಿನಾಂಕ 17.10.2014 ರಂದು ಆಗಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನಿತಾ ಕಾರ್ಯಪ್ಪ ಅವರನ್ನು ಸೇವೆಯಿಂದ ವಜಾ ಮಾಡಿತ್ತು. ಅನಿತಾ ಸದರಿ ಸಂಘಕ್ಕೆ ಗುಮಾಸ್ತೆಯಾಗಿ ಸೇವೆಗೆ ಸೇರಿದ 10 ವರ್ಷಗಳ ನಂತರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನೌಕರಿ ಪಡೆದಿದ್ದು ಇದು ಕ್ರಮಬದ್ಧವಾಗಿಲ್ಲ ಎಂದು ಆರೋಪಿಸಿ ವಜಾ ಮಾಡಲಾಗಿತ್ತು. ಈ ವಜಾ ಆದೇಶದ ವಿರುದ್ಧ ಅನಿತಾ ಸಹಕಾರ ಸಂಘಗಳ ಅಧಿನಿಯಮ 1959ರ ಪ್ರಕರಣ 70ರ ಅಡಿಯಲ್ಲಿ ಸಹಕಾರ ಸಂಘಗಳ ಸಹಾಯಕ ನಿಬಂಧಕರು ಮಡಿಕೇರಿ ಇವರ ನ್ಯಾಯಾಲಯದಲ್ಲಿ ದಾವೆ ಹೂಡಿ ನ್ಯಾಯ ಕೋರಿದ್ದರು. ಆಡಳಿತಾತ್ಮಕ ಕಾರಣದಿಂದ ಸದರಿ ದಾವೆಯನ್ನು ಸಹಕಾರ ಸಂಘಗಳ ಜಂಟಿ ನಿಬಂಧಕರು ಮೈಸೂರು ಇವರು ಹುಣಸೂರು
ಅನಿತಾ ಕಾರ್ಯಪ್ಪ ವಜಾ ಆದೇಶ ರದ್ದು
(ಮೊದಲ ಪುಟದಿಂದ) ಉಪವಿಭಾಗ ನ್ಯಾಯಾಲಯಕ್ಕೆ ವರ್ಗಾಯಿಸಿದ್ದರು. ಈ ನ್ಯಾಯಾಲಯ ತಾ. 16.06.2020 ರಂದು ತೀರ್ಪು ನೀಡಿ ಅನಿತಾ ಅವರ ದಾವೆ ಅರ್ಜಿಯನ್ನು ಪುರಸ್ಕರಿಸಿದೆ. ಆಡಳಿತ ಮಂಡಳಿ ಮಾಡಿದ್ದ ವಜಾ ಆದೇಶವನ್ನು ರದ್ದುಪಡಿಸಿ ಅನಿತಾ ಅವರಿಗೆ ತಡೆ ಹಿಡಿಯಲಾಗಿದ್ದ ವೇತನ, ಭತ್ಯೆ, ಇತ್ಯಾದಿ ಆರ್ಥಿಕ ಸೌಲಭ್ಯ ನಿಗದಿ ಪಡಿಸಿ ನೀಡುವಂತೆ ಆಡಳಿತ ಮಂಡಳಿಗೆ ಆದೇಶ ನೀಡಿದೆ.
ಕಕ್ಷಿದಾರರ ಪರ ಮಡಿಕೇರಿಯ ವಕೀಲರಾದ ಸಜನ್ ಕುಮಾರ್ ನಾಯಕ್ ಹಾಗೂ ಮೈಸೂರಿನ ಜ್ಞಾನೇಶ್ ವಕಾಲತ್ತು ವಹಿಸಿದ್ದರು.