ಮಡಿಕೇರಿ, ಜು. 12: ಪ್ರವಾಸೋದ್ಯಮ ಇಲಾಖೆ ಹಾಗೂ ಮಡಿಕೇರಿ ಗ್ರಾಮಾಂತರ ಪೆÇಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ನಿನ್ನೆ ರಾತ್ರಿ ಹೋಂ ಸ್ಟೇಯೊಂದಕ್ಕೆ ಧಾಳಿ ನಡೆಸಿ, ಪ್ರವಾಸಿಗರ ಸಹಿತ ಮನೆ ಮಾಲೀಕರ ವಿರುದ್ಧ ಮೊಕದ್ದಮೆ ದಾಖಲಿಸಲಾಗಿದೆ.ಮರಗೋಡು ಪಂಚಾಯಿತಿಯ ಹುಲಿತಾಳ ಸಮೀಪ ಭಾರತಿ ಎಂಬವರ ಮನೆಯಲ್ಲಿ ಮೂರು ದಿನದಿಂದ ಅನಧಿಕೃತವಾಗಿ ಅತಿಥಿಗಳನ್ನು ಇರಿಸಿಕೊಳ್ಳಲಾಗಿತ್ತು. ಪ್ರವಾಸಿಗರು ಡ್ರೋನ್ ಕ್ಯಾಮರಾ ಇತ್ಯಾದಿ ಬಳಸಿ ಸಾರ್ವಜನಿಕರಿಗೆ (ಮೊದಲ ಪುಟದಿಂದ) ಕಿರಿಕಿರಿ ಉಂಟುಮಾಡಿದ್ದರು. ಈ ಕುರಿತು ಗ್ರಾಮಸ್ಥರು ಹೋಂ ಸ್ಟೆ ಅಸೋಸಿಯೇಷನ್, ಪ್ರವಾಸೋದ್ಯಮ ಇಲಾಖೆ, ಗ್ರಾಮಾಂತರ ಠಾಣಾ ಪೆÇಲೀಸರಿಗೆ ದೂರು ನೀಡಿದ್ದರು. ಸೂಕ್ತ ಕ್ರಮಕ್ಕೆ ಹೋಂ ಸ್ಟೇ ಅಸೋಸಿಯೇಷನ್ ಸಂಬಂಧಿಸಿ ದವರಿಗೆ ಮನವಿ ಮಾಡಿತ್ತು.ದೂರಿನ ಆಧಾರದಲ್ಲಿ ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ರಾಘವೇಂದ್ರ, ಸಿಬ್ಬಂದಿ ಅಶ್ವಥ್, ಠಾಣಾಧಿಕಾರಿ ಚಂದ್ರಶೇಖರ್ ನಿರ್ದೇಶನದಲ್ಲಿ ಪೆÇಲೀಸರ ತಂಡ ನಿನ್ನೆ ರಾತ್ರಿ 10.30ಕ್ಕೆ ಧಾಳಿ ನಡೆಸಿತು. ಮನೆಯಲ್ಲಿ ಮೈಸೂರಿನ ಮೂವರು ತರುಣರು ಇದ್ದು, ಅವರು ನಮ್ಮ ನೆಂಟರು ಎಂದು ಮನೆಯವರು ಸುಳ್ಳು ಹೇಳಿದ್ದರು. ಆದರೆ ಅವರ ಗುರುತಿನ ಚೀಟಿಗಳನ್ನು ಪರಿಶೀಲಿಸಿದಾಗ ಮೈಸೂರಿನ ಪ್ರವಾಸಿಗರು ಎಂಬುದು ಬಯಲಾಯಿತು. ಈ ಹಿನ್ನೆಲೆಯಲ್ಲಿ ಮನೆಯ ಮಾಲೀಕರಾದ ಭಾರತಿ, ಪ್ರವಾಸಿಗರಾದ ವಿವೇಕ್, ಅನಿಲ್, ಅವಿನಾಶ್ ವಿರುದ್ಧ ಮೊಕದ್ದಮೆ ದಾಖಲಿಸಲಾಯಿತು.

ತಡರಾತ್ರಿಯವರೆಗೂ. ಕಾರ್ಯಾಚರಣೆ ನಡೆದು, ಇಂದು ಅನಧಿಕೃತ ಹೋಂ ಸ್ಟೇಗೆ ಬೀಗ ಜಡಿಯಲಾಗಿದೆ.

ಕೊಡಗಿನಲ್ಲಿ ಅಧಿಕೃತ ಹೋಂ ಸ್ಟೇ ಗಳು ಫೆಬ್ರವರಿ ತಿಂಗಳಿನಿಂದಲೆ ಪ್ರವಾಸಿಗರನ್ನು ಪಡೆಯದೆ ಮುಚ್ಚಿದ್ದು, ಪ್ರವಾಸಿಗರನ್ನು ಸ್ವೀಕರಿಸುವ ಅನಧಿಕೃತ ಹೋಂ ಸ್ಟೇ ಜಾಲವನ್ನು ಕಂಡುಹಿಡಿಯಲು ಸಹಕರಿಸುವಂತೆ ಹೋಂ ಸ್ಟೇ ಅಸೋಸಿಯೇಷನ್ ಮನವಿ ಮಾಡಿದೆ.

ಪ್ರವಾಸಿಗರನ್ನು ಪಡೆಯದಂತೆ ಈ ಹಿಂದೆ ಮಾಡಿದ ಮನವಿ ಧಿಕ್ಕರಿಸಿ ದೊಡ್ಡ ರೆಸಾರ್ಟ್‍ಗಳು ವ್ಯವಹಾರ ಆರಂಭಿಸಿದ್ದುದನ್ನು ಅಸೋಸಿಯೇಷನ್ ಖಂಡಿಸಿದೆ. ಅವರು ವ್ಯವಹಾರ ನಡೆಸಿದ್ದರೂ ಹಲವರು ಹೋಂಸ್ಟೇಗಳ ಮೇಲೆ ಗೂಬೆ ಕೂರಿಸುವ ಯತ್ನ ನಡೆಸಿದರು ಎಂದು ಆರೋಪಿಸಿದೆ. ಕಾನೂನು ಪಾಲಿಸದವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆ ಜಿಲಾಡಳಿತವನ್ನು ಒತ್ತಾಯಿಸಿದೆ.