ಮಡಿಕೇರಿ, ಜು. 12: ವೀರಾಜಪೇಟೆ ತಾಲೂಕು ಗೋಣಿ ಕೊಪ್ಪಲು ಪಟ್ಟಣದ ವರ್ತಕ ಕುಟುಂಬ ವೊಂದರ 86 ವರ್ಷ ಇಳಿವಯಸ್ಸಿನ ವೃದ್ಧೆ ಕಳೆದ ರಾತ್ರಿ 10.45ರ ಸಮಯದಲ್ಲಿ ಇಲ್ಲಿನ ಜಿಲ್ಲಾ ಕೋವಿಡ್-19 ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿನಿಂದ ಚಿಕಿತ್ಸೆ ಫಲಕಾರಿಯಾಗದೆ ಸಾವಿಗೀಡಾಗಿ ದ್ದಾರೆ. ವೃದ್ಧಾಪ್ಯ ಸಹಜ ಕಾಯಿಲೆಯೊಂದಿಗೆ ರಕ್ತದೊತ್ತಡ ಹಾಗೂ ಇತರ ಸಮಸ್ಯೆಗಳಿಂದ ಮೊದಲೇ ಬಳಲುತ್ತಿದ್ದ ಅವರು, ಕೊರೊನಾ ಸೋಂಕು ಕಾಣಿಸಿ ಕೊಂಡಿದ್ದರಿಂದ ತಾ. 6 ರಂದು ಆಸ್ಪತ್ರೆಗೆ ದಾಖಲಾಗಿದ್ದು, ತಾ. 7 ರಿಂದ ವೆಂಟಿಲೇಟರ್ ಮೂಲಕ ಚಿಕಿತ್ಸೆ ಕಲ್ಪಿಸಲಾಗಿತ್ತು.

ಮೃತ ವೃದ್ಧೆಯ ಪತಿ 94ರ ಇಳಿವಯಸ್ಸಿನ ವೃದ್ಧ ಕೂಡ ಅನಾರೋಗ್ಯ ನಡುವೆ ಕೊರೊನಾ ಸೋಂಕು ಕಾಣಿಸಿಕೊಂಡು ಮೈಸೂರಿನ ಆಸ್ಪತ್ರೆಯೊಂದಲ್ಲಿ ಚಿಕಿತ್ಸೆಗೆ ಒಳಗಾಗಿದ್ದಾರೆ ಎಂದು ಕುಟುಂಬ ಮೂಲಗಳಿಂದ ಗೊತ್ತಾಗಿದೆ.ನಿಯಮಾನುಸಾರ ಅಂತ್ಯಸಂಸ್ಕಾರ ಮೃತೆಯ ಅಂತ್ಯಸಂಸ್ಕಾರವನ್ನು ಇಂದು ಮಡಿಕೇರಿಯ ಚೈನ್‍ಗೇಟ್ ಬಳಿಯ ರುದ್ರಭೂಮಿಯಲ್ಲಿ ಕೋವಿಡ್-19 ಸಾವಿನ ಮಾರ್ಗಸೂಚಿಯಂತೆ ಮಡಿಕೇರಿ ತಹಶೀಲ್ದಾರ್ ಪಿ.ಎಸ್. ಮಹೇಶ್ ಅವರ ಸಮಕ್ಷಮದಲ್ಲಿ ನೆರವೇರಿಸ ಲಾಯಿತು. ನಗರ ಪೊಲೀಸ್ ಠಾಣಾಧಿಕಾರಿ ಟಿ.ಎಸ್. ಅಂತಿಮ, ಪೌರ ಕಾರ್ಮಿಕರಾದ ಓಬಳಿ ಮತ್ತು ತಂಡದವರು, ವಿ.ಹಿಂ.ಪ. ಯುವ ಘಟಕ ಬಜರಂಗದಳದ ಕೆ.ಹೆಚ್. ಚೇತನ್ ಹಾಗೂ ಕಾರ್ಯಕರ್ತರಾದ ಸುರೇಶ್ ಮುತ್ತಪ್ಪ, ವಿನಯ್, ಪವನ್, ಸತ್ಯ, ಚರಣ್, ಮನು ಇತರರು ಪಾಲ್ಗೊಂಡಿದ್ದರು.

ಮತ್ತೊಂದು ಪ್ರಕರಣದಲ್ಲಿ ಮಡಿಕೇರಿ ತಾಲೂಕು ಚೇರಂಬಾಣೆ ನಿವಾಸಿ 77 ವರ್ಷದ ಪುರುಷ ರೊಬ್ಬರು ಸಂಜೆ 4.15 ಗಂಟೆಗೆ ಕೋವಿಡ್ ಆಸ್ಪತ್ರೆಯಲ್ಲಿ ತೀವ್ರ ಕಿಡ್ನಿ ಸಮಸ್ಯೆಯಿಂದ ಮೃತರಾಗಿದ್ದಾರೆ. ಇವರು ರಕ್ತದೊತ್ತಡ ಸಮಸ್ಯೆ ಯಿಂದಲೂ ಬಳಲುತ್ತಿದ್ದರು. ತಾ. 9 ರಂದು ಕೋವಿಡ್ ಆಸ್ಪತ್ರೆಗೆ ಪುನರ್ ದಾಖಲಾಗಿದ್ದರು.

ತಾ. 13 ರಂದು (ಇಂದು) ಸರಕಾರದ ನಿಯಮಾನುಸಾರ ಮೃತರ ಅಂತ್ಯಕ್ರಿಯೆಯನ್ನು

(ಮೊದಲ ಪುಟದಿಂದ) ನೆರವೇರಿಸಲಾಗುವುದೆಂದು ಜಿಲ್ಲಾಧಿಕಾರಿ ಪ್ರಕಟಣೆ ತಿಳಿಸಿದೆ. ಜಿಲ್ಲೆಯಲ್ಲಿ ಇದುವರೆಗೂ ಕೊರೊನಾ ಸೋಂಕಿನಿಂದ ಮೂರು ಮಂದಿ ಮೃತಪಟ್ಟಿದ್ದಾರೆ.

ಜಿಲ್ಲಾಧಿಕಾರಿ ಮಾಹಿತಿ

ಕೊಡಗು ಜಿಲ್ಲೆಯಲ್ಲಿ ಈ ದಿನ ಹೊಸದಾಗಿ 18 ಕೋವಿಡ್ ಸೋಂಕಿತ ಪ್ರಕರಣಗಳು ಮತ್ತು 2 ಸಾವು ಸಂಭವಿಸಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸೋಮವಾರಪೇಟೆ ತಾಲೂಕು ತಲ್ತರೆಶೆಟ್ಟಳ್ಳಿ ನಿವಾಸಿ, ಬೆಂಗಳೂರಿಂದ ಹಿಂದಿರುಗಿರುವ ಮತ್ತು ಜ್ವರ ಲಕ್ಷಣವಿದ್ದ 36 ವರ್ಷದ ಪುರುಷರೊಬ್ಬರಿಗೆ ಸೋಂಕು ದೃಢಪಟ್ಟಿದೆ.

ವೀರಾಜಪೇಟೆ ತಾಲೂಕು ತೋರ ಗ್ರಾಮದ ಜ್ವರ ಲಕ್ಷಣವಿದ್ದ 29 ವರ್ಷದ ಪುರುಷರೊಬ್ಬರಿಗೆ ಸೋಂಕು ದೃಢಪಟ್ಟಿದೆ. ಗೋಣಿಕೊಪ್ಪದ ವಿಜಯನಗರ ಬಡಾವಣೆಯ ನಿವಾಸಿ 39 ವರ್ಷದ ಮಹಿಳಾ ಆರೋಗ್ಯ ಕಾರ್ಯಕರ್ತರೊಬ್ಬರಿಗೆ ಸೋಂಕು ಪತ್ತೆಯಾಗಿದ್ದು, ಮಡಿಕೇರಿಯ ಮೆಡಿಕಲ್ ಕಾಲೇಜು ಬಳಿಯ ಪರಿಷ್ ಬಾಣೆಯ 34 ವರ್ಷದ ಮಹಿಳಾ ಆರೋಗ್ಯ ಕಾರ್ಯಕರ್ತೆಗೆ ಸೋಂಕು ದೃಢಪಟ್ಟಿದೆ.

ಕುಶಾಲನಗರ ನಿವಾಸಿ ಶಿವರಾಮ ಕಾರಂತ ಬಡಾವಣೆಯ 55 ವರ್ಷದ ಮಹಿಳಾ ಆರೋಗ್ಯ ಕಾರ್ಯಕರ್ತೆಗೆ ಸೋಂಕು ಕಂಡುಬಂದಿದೆ.

ಇತ್ತೀಚೆಗೆ ಕೋವಿಡ್ ಸೋಂಕಿನಿಂದ ಮೃತಪಟ್ಟ ಸೋಮವಾರಪೇಟೆ ತಾಲೂಕು ಕುಶಾಲನಗರದ ದಂಡಿನಪೇಟೆಯ ವ್ಯಕ್ತಿಯ ಪ್ರಾಥಮಿಕ ಸಂಪರ್ಕದಲ್ಲಿದ್ದ 25 ವರ್ಷದ ಮಹಿಳೆ, 45 ವರ್ಷದ ಮಹಿಳೆ, 49 ವರ್ಷದ ಪುರುಷ, 40 ವರ್ಷದ ಮಹಿಳೆ, 22 ವರ್ಷದ ಮಹಿಳೆ, 20 ವರ್ಷದÀ ಯುವಕÀ, 17 ವರ್ಷದ ಯುವತಿ, 24 ವರ್ಷದ ಯುವಕನಿಗೆ ಸೋಂಕು ಪತ್ತೆಯಾಗಿದೆ.

ಕೊಡ್ಲಿಪೇಟೆಯ ಊರುಗುತ್ತಿ ನಿವಾಸಿ, ಮಹಾರಾಷ್ಟ್ರದಿಂದ ಹಿಂದಿರುಗಿರುವ ಜ್ವರ ಲಕ್ಷಣಗಳಿದ್ದ 63 ವರ್ಷದ ಮಹಿಳೆಗೆ, ಹೆಬ್ಬಾಲೆ ಗ್ರಾಮದ ಅಂಬೇಡ್ಕರ್ ಬ್ಲಾಕ್‍ನ ಜ್ವರ ಲಕ್ಷಣಗಳಿದ್ದ 45 ವರ್ಷದ ಮಹಿಳೆಯೊಬ್ಬರಿಗೆ ಸೋಂಕು ದೃಢಪಟ್ಟಿದೆ. ಸುಂಟಿಕೊಪ್ಪದ ಜ್ವರ ಲಕ್ಷಣಗಳಿದ್ದ 11 ವರ್ಷದ ಬಾಲಕಿಗೆ ಸೋಂಕು ಗೋಚರಿಸಿದೆ.

ಮಡಿಕೇರಿಯ ಪುಟಾಣಿ ನಗರದ ಚಾಮರಾಜ ಬಂಗಲೆ ಬಳಿಯ 53 ವಯಸ್ಸಿನ ಆ್ಯಂಬ್ಯುಲೆನ್ಸ್ ಚಾಲಕರೊಬ್ಬರಿಗೆ ಸೋಂಕು ದೃಢಪಟ್ಟಿದೆ.

ಕುಶಾಲನಗರದ ಅಯ್ಯಪ್ಪಸ್ವಾಮಿ ದೇವಸ್ಥಾನ ರಸ್ತೆ ನಿವಾಸಿ ಜ್ವರ ಲಕ್ಷಣಗಳಿದ್ದ 63 ವರ್ಷದ ಪುರುಷರೊಬ್ಬರಿಗೆ ಸೋಂಕು ದೃಢಪಟ್ಟಿದೆ. ಜಿಲ್ಲೆಯಲ್ಲಿ ಹೊಸದಾಗಿ 10 ನಿಯಂತ್ರಿತ ವಲಯಗಳನ್ನು ತೆರೆಯಲಾಗಿದೆ. ಸೋಮವಾರಪೇಟೆ ತಾಲೂಕಿನ ತಲ್ತರೆಶೆಟ್ಟಳ್ಳಿ, ಊರುಗುತ್ತಿ, ಕೊಡ್ಲಿಪೇಟೆ, ಕುಶಾಲನಗರ ಅಯ್ಯಪ್ಪ ದೇವಾಲಯ ರಸ್ತೆ, ಅಲ್ಲಿನ ಶಿವರಾಮಕಾರಂತ ಬಡಾವಣೆ, ಅಂಬೇಡ್ಕರ್ ಬ್ಲಾಕ್, ಹೆಬ್ಬಾಲೆ, ಪ್ರಾಥಮಿಕ ಆರೋಗ್ಯ ಕೇಂದ್ರದ ಹಿಂಭಾಗ, ಸುಂಟಿಕೊಪ್ಪ ಸೇರ್ಪಡೆಗೊಂಡಿವೆ.

ಅಲ್ಲದೆ ಮಡಿಕೇರಿಯ ಚಾಮರಾಜ ಬಂಗ್ಲೆ, ಪುಟಾಣಿ ನಗರ, ಪರಿಷ್ ಬಾಣೆ ನಿರ್ಬಂಧಿಸಲ್ಪಟ್ಟಿವೆ. ವೀರಾಜಪೇಟೆ ಸಮೀಪದ ತೋರ ಗ್ರಾಮ ಕೂಡ ನಿರ್ಬಂಧವಾಗಿದೆ.

ಜಿಲ್ಲೆಯಲ್ಲಿ ವರದಿಯಾದ ಸೋಂಕಿತ ಪ್ರಕರಣಗಳು ಒಟ್ಟು 169 ಹಾಗೂ ಆಸ್ಪತ್ರೆಯಿಂದ ಬಿಡುಗಡೆಗೊಂಡ ಪ್ರಕರಣಗಳು 68 ಆಗಿವೆ. ಸಕ್ರಿಯ ಪ್ರಕರಣಗಳು 98 ಇದ್ದು, ಮೃತಪಟ್ಟ ಪ್ರಕರಣಗಳು 3ಕ್ಕೆ ತಲುಪಿವೆ. ಒಟ್ಟು ನಿಯಂತ್ರಿತ ಪ್ರದೇಶಗಳು 68ಕ್ಕೆ ಏರಿಕೆಯಾಗಿವೆ.

ಸಂಪರ್ಕ ಮುಕ್ತ: ಈ ನಡುವೆ ಮೂರ್ನಾಡುವಿನ ಸುಭಾಷ್‍ನಗರ, ಕುಶಾಲನಗರದ ಅಣ್ಣೇಗೌಡ ಬಡಾವಣೆ, ವೀರಾಜಪೇಟೆಯ ಮೀನುಪೇಟೆ ಸಾರ್ವಜನಿಕ ಸಂಪರ್ಕ ಮುಕ್ತಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.