ಕೂಡಿಗೆ, ಜು. 11 : ಹೆಬ್ಬಾಲೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಎರಡು ಕೊರೊನಾ ಸೋಂಕಿತ ವ್ಯಕ್ತಿಗಳು ಪತ್ತೆಯಾದ ಹಿನ್ನೆಲೆಯಲ್ಲಿ ಹೆಬ್ಬಾಲೆಯ ಎರಡು ಬೀದಿಗಳನ್ನು ಸೀಲ್‍ಡೌನ್ ಮಾಡಿರುವುದರಿಂದ ಬೇರೆ ಬೀದಿಗಳ ಮತ್ತು ಮುಖ್ಯ ರಸ್ತೆಯ ಅಂಗಡಿ ಮಾಲೀಕರು ಸ್ವಯಂ ಪ್ರೇರಿತವಾಗಿ ತಮ್ಮ ಅಂಗಡಿ ಮುಂಗಟ್ಟುಗಳನ್ನು 12 ಗಂಟೆಗೆ ಬಂದ್ ಮಾಡಿದರು.