ನಾಪೆÇೀಕ್ಲು, ಜು. 11: ಕೊರೊನಾ ಪಾಸಿಟಿವ್ ಕಾಣಿಸಿಕೊಂಡ ಸಮೀಪದ ಪಾರಾಣೆ ಕೊಣಂಜಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿದ್ದಂಡ ಕಾಲೋನಿ, ಕೈಕಾಡು, ತಕ್ಕುಡಿ ಕಾಲೋನಿಗಳಿಗೆ ಜಿಲ್ಲಾ ಪಂಚಾಯಿತಿ ಸದಸ್ಯ ನೆಲ್ಲಚಂಡ ಕಿರಣ್ ಕಾರ್ಯಪ್ಪ, ತಾಲೂಕು ಪಂಚಾಯಿತಿ ಸದಸ್ಯೆ ಉಮಾಪ್ರಭು ಭೇಟಿ ನೀಡಿದರು. ಸೀಲ್ಡೌನ್ಗೆ ಒಳಪಟ್ಟ ಪ್ರದೇಶದ ಜನರೊಂದಿಗೆ ಮೊಬೈಲ್ ಮೂಲಕ ಮಾತನಾಡಿ ಜನರಿಗೆ ಧೈರ್ಯ ತುಂಬುವದರೊಂದಿಗೆ ಏನೇ ಸಮಸ್ಯೆಯಿದ್ದರೂ ತಮ್ಮನ್ನು ಸಂಪರ್ಕಿಸುವಂತೆ ತಿಳಿಸಿದರು. ಗ್ರಾಮಸ್ಥರಾದ ಪಾಡೆಯಂಡ ಕಟ್ಟಿ ಕುಶಾಲಪ್ಪ, ಮತ್ತಿತರರಿದ್ದರು.