ಧನ್ವಂತರಿ ರಥ್ ಜಾರಿಗೆ ಚಿಂತನೆ

ನವದೆಹಲಿ, ಜು. 11: ದೇಶದಲ್ಲಿನ ಕೋವಿಡ್-19 ಪರಿಸ್ಥಿತಿಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಶ&divound;ವಾರ ಪರಿಶೀಲನೆ ನಡೆಸಿದರು. ಗುಜರಾತ್ ಅಹಮದಾಬಾದ್ ನಗರದಲ್ಲಿ ಯಶಸ್ವಿಯಾಗಿ ಜಾರಿಗೊಳಿಸುತ್ತಿರುವ ಧನ್ವಂತರಿ ರಥ್ ಕಾರ್ಯಕ್ರಮ ಇತರ ಪ್ರದೇಶಗಳಲ್ಲೂ ಜಾರಿಗೊಳಿಸಿದರೆ ಉತ್ತಮವಾಗಿರುತ್ತದೆ ಎಂದು ಪ್ರಧಾನಿ ಸೂಚಿಸಿದರು. ವೀಡಿಯೋ ಕಾನ್ಫರೆನ್ಸ್ ಮೂಲಕ ಆಯೋಜಿಸಿದ್ದ ಸಭೆಯಲ್ಲಿ ಗೃಹ ಸಚಿವ ಅಮಿತ್ ಶಾ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಹರ್ಷ ವರ್ಧನ್, ನೀತಿ ಆಯೋಗದ ಸದಸ್ಯರು, ಸಂಪುಟ ಕಾರ್ಯದರ್ಶಿ, ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು. ಪ್ರಸ್ತುತ ಪರಿಸ್ಥಿತಿ, ಕೈಗೊಳ್ಳುತ್ತಿರುವ ಜಾಗೃತ ಕ್ರಮಗಳ ಬಗ್ಗೆ ಪ್ರಧಾನಿ ಮೋದಿ ಈ ಸಭೆಯಲ್ಲಿ ಪರಿಶೀಲಿಸಿದರು. ಕೊರೊನಾ ವೈರಸ್ ಸಾಂಕ್ರಾಮಿಕದ ಬಗ್ಗೆ ಪ್ರತಿಯೊಬ್ಬರಿಗೂ ತಿಳಿಯುವಂತೆ ವ್ಯಾಪಕ ಪ್ರಮಾಣದಲ್ಲಿ ಜಾಗೃತಿ, ಪ್ರಚಾರ ನಡೆಸಬೇಕೆಂದು ಸೂಚಿಸಿದರು. ಸಾಂಕ್ರಾಮಿಕವನ್ನು ಸಮರ್ಥವಾಗಿ ತಡೆಗಟ್ಟುತ್ತಿರುವ ಕೇಂದ್ರ, ರಾಜ್ಯ, ಸ್ಥಳೀಯ ಅಧಿಕಾರಿಗಳನ್ನು ಪ್ರಧಾನಿ ಈ ಸಂದರ್ಭದಲ್ಲಿ ಪ್ರಶಂಸಿಸಿದರು.

ಪ್ರವಾಸೋದ್ಯಮ ಸಚಿವರಿಗೆ ಸೋಂಕು ದೃಢ

ಬೆಂಗಳೂರು, ಜು. 11: ಮಹಾಮಾರಿ ಕೊರೊನಾ ವೈರಸ್ ರಾಜ್ಯದಲ್ಲಿ ವ್ಯಾಪಕವಾಗಿ ಹರಡುತ್ತಿದ್ದು, ಶನಿವಾರ ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ ಅವರಿಗೆ ಕೋವಿಡ್-19 ಪಾಸಿಟಿವ್ ದೃಢಪಟ್ಟಿದೆ. ಈ ಕುರಿತು ಟ್ವೀಟ್ ಮಾಡಿರುವ ಸಿ.ಟಿ. ರವಿ ಅವರು, ನಾನು ಕ್ಷೇಮವಾಗಿದ್ದೇನೆ. ಕೊರೊನಾ ಲಕ್ಷಣಗಳಿಲ್ಲ. ಈಗ ಹೋಮ್ ಕ್ವಾರಂಟೈನ್‍ನಲ್ಲಿ ಇದ್ದೇನೆ. ಸದ್ಯ ನನ್ನ ತೋಟದ ಮನೆಯಲ್ಲೇ ವಾಕ್ ಮಾಡುತ್ತಿದ್ದೇನೆ ಎಂದು ಮಾಹಿತಿ ನೀಡಿದ್ದಾರೆ. ರಾಜ್ಯದ ಹಲವು ಶಾಸಕರು, ಸಂಸದರು ಹಾಗೂ ವಿಧಾನ ಪರಿಷತ್ ಸದಸ್ಯರಿಗೆ ವಕ್ಕರಿಸಿದ್ದ ಕೊರೊನಾ ಇದೀಗ ಸಚಿವರಿಗೂ ತಗುಲಿದೆ.

ಕೋವಿಡ್ ಆಸ್ಪತ್ರೆಗೆ 810 ಸಿಬ್ಬಂದಿಗಳು

ಬೆಂಗಳೂರು, ಜು. 11: ಕೋವಿಡ್ &divound;ಯಂತ್ರಣ ಹಾಗೂ ಸೋಂಕಿತರ ಸೂಕ್ತ ಚಿಕಿತ್ಸೆಗಾಗಿ ರಾಜ್ಯದ 18 ಜಿಲ್ಲಾ ಆಸ್ಪತ್ರೆಗಳಲ್ಲಿ ಪ್ರತಿ ಆಸ್ಪತ್ರೆಗೆ 45 ಸಿಬ್ಬಂದಿ ಸೇರಿದಂತೆ 810 ಸಿಬ್ಬಂದಿಯನ್ನು ಗುತ್ತಿಗೆ ಮೇರೆಗೆ ನೇಮಕ ಮಾಡಿಕೊಳ್ಳಲು ಜಿಲ್ಲಾ ಶಸ್ತ್ರಚಿಕಿತ್ಸರಿಗೆ ಅನುಮೋದನೆ ನೀಡಿ ಎಂದು ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಸ್ಥಾಪಿಸಿರುವ ಕೋವಿಡ್ ಕೇರ್ ಕೇಂದ್ರಗಳ &divound;ರ್ವಹಣಣೆಗಾಗಿ 1700 ಹೆಚ್ಚುವರಿ ಸಿಬ್ಬಂದಿಯನ್ನು 6 ತಿಂಗಳ ಅವಧಿಗೆ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು ಸರ್ಕಾರ ಅನುಮೋದನೆ ನೀಡಿದೆ. ಬೆಂಗಳೂರು ನನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ ಕೋವಿಡ್ ಚಿಕಿತ್ಸೆಗಾಗಿ ಗುರತಿಸಿರುವ 12 ಆಸ್ಪತ್ರೆಗಳಿಗೆ ಹೆಚ್ಚುವರಿಯಾಗಿ 707 ಸಿಬ್ಬಂದಿಯನ್ನು ಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಳ್ಳಲು ಅನುಮೋದನೆ ನೀಡಲಾಗಿದೆ. ರಾಜ್ಯದಲ್ಲಿ 1246 ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿಗಳು, 824 ತಜ್ಞ ವೈದ್ಯರು ಮತ್ತು 88 ದಂತ ವೈದ್ಯಾಧಿಕಾರಿಗಳ ಸ್ವಯಂ ಸ್ವಯಂ ನೇಮಕಾತಿ ಪ್ರಕ್ರಿಯೆ ಚಾಲನೆಯಲ್ಲಿದೆ.

ಚೆಕ್ ನಗದು ಅವಧಿ ವಿಸ್ತರಣೆ ಅಸಾಧ್ಯ

ನವದೆಹಲಿ, ಜು. 11: ಲಾಕ್‍ಡೌನ್ ಜಾರಿಯಲ್ಲಿರುವುದರಿಂದ ಚೆಕ್ ಗಳಿಗಿರುವ ಮೂರು ತಿಂಗಳ ಅವಧಿಯನ್ನು ವಿಸ್ತರಣೆ ಮಾಡಲು ಸಾಧ್ಯವಾಗದು ಎಂದು ಸುಪ್ರೀಂಕೋರ್ಟ್ ಮಹತ್ವದ ಆದೇಶ ನೀಡಿದೆ. ಕೊರೊನಾ ಸೋಂಕಿನ ಕಾರಣ ಕಳೆದ ಮೂರು ತಿಂಗಳಿಗಿಂತ ಹೆಚ್ಚು ಲಾಕ್ಡೌನ್ ಜಾರಿಯಲ್ಲಿದೆ. ಈ ಹಿನ್ನೆಲೆ ಚೆಕ್ ಗಳಿಗಿರುವ ಮೂರು ತಿಂಗಳು ಅವಧಿಯನ್ನು ಹೆಚ್ಚು ಮಾಡಬೇಕು ಎಂಬ ಒತ್ತಾಯ ಎಲ್ಲ ಕಡೆಯಿಂದ ಕೇಳಿ ಬಂದಿತ್ತು. ಈ ಬಗ್ಗೆ ಸುಪ್ರೀಂಕೋರ್ಟ್‍ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಾಗಿತ್ತು. ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ ಪ್ರಕಾರ ಚೆಕ್‍ಗಳಿಗೆ ಮೂರು ತಿಂಗಳ ಅವಧಿಯನ್ನು ಭಾರತೀಯ ರಿಸರ್ವ್ ಬ್ಯಾಂಕ್ ನಿಗಧಿಪಡಿಸಿದೆ. ಚೆಕ್ ನೀಡಿದ ಮೂರು ತಿಂಗಳ ಒಳಗೆ ಅದನ್ನು ನಗದಿಕರಿಸಿಕೊಳ್ಳಬೇಕು. ಇಲ್ಲದಿದ್ದರೇ ಅದು ರದ್ದಾಗುತ್ತದೆ ಎಂದು ರಿಸರ್ವ್ ಬ್ಯಾಂಕ್ ಹೇಳುತ್ತದೆ. ಲಾಕ್‍ಡೌನ್ ಕಾರಣಕ್ಕೆ ಚೆಕ್‍ಗಳ ಅವಧಿಯನ್ನು ವಿಸ್ತರಿಸುವುದರಿಂದ ಬ್ಯಾಂಕಿಂಗ್ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ ಎಂದೂ ಸುಪ್ರೀಂಕೋರ್ಟ್ ಹೇಳಿದೆ.

ಪಾಕ್‍ನಲ್ಲಿ ದೇಗುಲ ನಿರ್ಮಾಣಕ್ಕೆ ಬೆಂಬಲ

ಇಸ್ಲಾಮಬಾದ್, ಜು. 11: ಇಸ್ಲಾಮಾಬಾದ್‍ನಲ್ಲಿ ಹಿಂದೂ ದೇವಸ್ಥಾನ ನಿರ್ಮಾಣಕ್ಕೆ ಪಾಕಿಸ್ತಾನ ಉಲೇಮಾ ಕೌನ್ಸಿಲ್ (ಪಿಯುಸಿ) ತನ್ನ ಬೆಂಬಲ ವ್ಯಕ್ತಪಡಿಸಿದೆ. ದೇಗುಲ ನಿರ್ಮಾಣವನ್ನು ವಿವಾದಾಸ್ಪದಗೊಳಿಸುವುದು ತಪ್ಪು ಎಂದು ಅದು ಅಭಿಪ್ರಾಯವ್ಯಕ್ತಪಡಿಸಿದೆ. ದೇಗುಲ ನಿರ್ಮಾಣ ಕುರಿತಂತೆ ವಿವಾದ ಸೃಷ್ಟಿಸುತ್ತಿರುವುದನ್ನು ನಾವು ಖಂಡಿಸುತ್ತೇವೆ. ತೀವ್ರವಾದಿ ಧರ್ಮ ಗುರುಗಳ ನಿಲುವು ಸರಿಯಾದುದಲ್ಲ. ಪಾಕಿಸ್ತಾನ ಉಲೇಮಾ ಕೌನ್ಸಿಲ್ ಈ ಸಂಬಂಧ ಸಭೆಯೊಂದನ್ನು ಕರೆದು ಇಸ್ಲಾಮಿಕ್ ಚಿಂತನೆಗಳ ಮಂಡಳಿಯ ವಿಚಾರಗಳನ್ನು ವಿವರಿಸಲಾಗುವುದು ಎಂದು ಪಿಯುಸಿ ಅಧ್ಯಕ್ಷ ಹಫಿಜ್ ಮೊಹಮದ್ ತಾಹಿರ್ ಮೆಹಮೂದ್ ಆಶ್ರಫಿ ಹೇಳಿದ್ದಾರೆ. ಪಾಕಿಸ್ತಾನ ಸಂವಿಧಾನ ದೇಶದಲ್ಲಿ ವಾಸವಾಗಿರುವ ಮುಸ್ಲಿಮರು ಹಾಗೂ ಮುಸ್ಲಿಮೇತರರ ಹಕ್ಕುಗಳನ್ನು ಸ್ಪಷ್ಟವಾಗಿ ನಿರೂಪಿಸಿದೆ ಎಂದು ಆಶ್ರಫಿ ವಿವರಿಸಿದ್ದಾರೆ.

ಚಿರತೆ ದಾಳಿಗೆ ಬಾಲಕ ಬಲಿ

ತುಮಕೂರು, ಜು. 11: ತುಮಕೂರಿನಲ್ಲಿ ಚಿರತೆ ದಾಳಿ ಪ್ರಕರಣ ಮುಂದುವರೆದಿದ್ದು, ಇಂದು ನಾಲ್ಕು ವರ್ಷದ ಬಾಲಕನನ್ನು ಚಿರತೆ ಕೊಂದು ಹಾಕಿರುವ ಘಟನೆ ವರದಿಯಾಗಿದೆ. ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಹುಲಿಯೂರು ದುರ್ಗ ಬಳಿಯ ಹಸೀಗೆ ಹೋಬಳಿಯ ರಾಜೇಂದ್ರಪುರ ಎಂಬ ಕುಗ್ರಾಮದಲ್ಲಿ ಇಂದು ಘಟನೆ ನಡೆದಿದೆ, ಮೃತ ಬಾಲಕನನ್ನು ಗ್ರಾಮದ ನಿವಾಸಿ ಮುನಿರಾಜು ಮತ್ತು ದೊಡ್ಡೀರಮ್ಮ ಎಂಬ ದಂಪತಿಯ ಅವರ ಪುತ್ರ ಚಂದು ಎಂದು ಗುರುತಿಸಲಾಗಿದೆ. ತಾಯಿ ದೊಡ್ಡೀರಮ್ಮ ಬಟ್ಟೆ ಒಗೆಯಲು ತಮ್ಮ ಮಗನನ್ನೂ ಕರೆದುಕೊಂಡು ಹೋಗಿದ್ದರು. ಈ ವೇಳೆ ಮಗು ಆಟವಾಡುತ್ತಿದ್ದಾಗ ಮಗು ಮೇಲೆ ದಾಳಿ ಮಾಡಿದ ಚಿರತೆ ಮಗುವನ್ನು ಎಳೆದೊಯ್ದಿದೆ. ಈ ವೇಳೆ ಇದನ್ನು ಕಂಡ ದಾರಿ ಹೋಕರು ಚಿರತೆಯನ್ನು ಬೆದರಿಸಿ ಮಗುವನ್ನು ರಕ್ಷಿಸುವ ಕೆಲಸ ಮಾಡಿದ್ದಾರೆ. ಆದರೆ ಜನರು ಆಗಮಿಸುತ್ತಿದ್ದಂತೆಯೇ ಚಿರತೆ ಮಗುವನ್ನು ಅಲ್ಲಿಂದ ಹೊತ್ತೊಯ್ದಿದೆ. ಈ ವೇಳೆ ಸುದ್ದಿತಿಳಿದ ಅರಣ್ಯ ಸಿಬ್ಬಂದಿ ಕೂಡಲೇ ಶೋಧ ನಡೆಸಿದ್ದು, ಅರಣ್ಯದೊಳಗೆ ಮಗುವಿನ ದೇಹ ಪತ್ತೆಯಾಗಿದೆ ಎಂದು ಆರ್‍ಎಫ್‍ಒ ಮಂಜುನಾಥ್ ಹೇಳಿದ್ದಾರೆ.