ಕೊಡ್ಲಿಪೇಟೆ, ಜು. 11: ಧರ್ಮಸ್ಥಳ ಗ್ರಾಮಾಬಿವೃದ್ಧಿ ಯೋಜನೆಯ “ಶಾಲಾ ವನ ನಾಟಿ” ಕಾರ್ಯಕ್ರಮಕ್ಕೆ ಕೊಡ್ಲಿಪೇಟೆ ಯ ಕಿರಿಕೊಡ್ಲಿ ಶಾಲೆಯ ಆವರಣದಲ್ಲಿ ಗಿಡಗಳನ್ನು ನೆಡುವ ಮೂಲಕ ಕಿರಿಕೊಡ್ಲಿ ಮಠದ ಸದಾಶಿವ ಸ್ವಾಮೀಜಿಗಳು ಚಾಲನೆ ನೀಡಿದರು. ಧರ್ಮಸ್ಥಳ ಯೋಜನೆಯ ಗಿಡ ನೆಡುವ ಕಾರ್ಯ ಕ್ರಮ ತುಂಬಾ ಉಪಯುಕ್ತವಾದದ್ದು ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಸ್ವಾಮೀಜಿಗಳು, ಹಣ್ಣಿನ ಗಿಡಗಳು ಸೇರಿದಂತೆ ಎಲ್ಲಾ ಗಿಡ, ಮರಗಳನ್ನು ಪರಿಸರದ ಸಂರಕ್ಷಣೆಗಾಗಿ ಪೆÇೀಷಿಸಿ ಬೆಳೆಸಬೇಕೆಂದು ಹೇಳಿದರು.

ಸೋಮವಾರಪೇಟೆ ತಾಲೂಕು ಯೋಜನಾಧಿಕಾರಿ ಪ್ರಕಾಶ್ ಸದರಿ ಕಾರ್ಯಕ್ರಮವು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಡೆ ಯವರ ಮಾರ್ಗದರ್ಶನದಲ್ಲಿ ಪರಿಸರ ದಿನದ ಅಂಗವಾಗಿ ರಾಜ್ಯದೆಲ್ಲೆಡೆ ಅನುಷ್ಠಾನಕ್ಕೆ ಬಂದಿದೆ. ಸೋಮವಾರ ಪೇಟೆ ತಾಲೂಕಿನ ಕೊಡ್ಲಿಪೇಟೆಯಲ್ಲಿ ಇಂದು ಸಾಮೀಜಿಗಳು ಅಧಿಕೃತವಾಗಿ ಚಾಲನೆ ನೀಡಿದ್ದಾರೆ. ಇದನ್ನು ಮುಂದುವರೆಸಿ ತಾಲೂಕಿನಾದ್ಯಂತ ಎಲ್ಲಾ ಶಾಲೆಗಳಲ್ಲಿ ಹಮ್ಮಿಕೊಂಡು ಹಣ್ಣಿನ ಗಿಡ ಸೇರಿದಂತೆ ಉಪಯುಕ್ತವಾದ ಗಿಡಗಳನ್ನು ನಾಟಿ ಮಾಡಲಿದ್ದೇವೆಂದರು.

ಮದ್ಯವರ್ಜನ ವ್ಯವಸ್ಥಾಪನಾ ಸಮಿತಿಯ ಅಧÀ್ಯಕ್ಷ ವರಪ್ರಸಾದ್, ಸದಸ್ಯರಾದ ಶಬ್ಬಿರ್, ಹುಸೈನ್, ಕೊಪ್ಪಲ್, ಜನಜಾಗೃತಿ ಸಮಿತಿ ಜಿಲ್ಲಾ ಉಪಾಧÀ್ಯಕ್ಷ ಭಗವಾನ್ ಗೌಡ, ಸದಸ್ಯ ಇಂದ್ರೋಜಿ ರಾವ್, ಕೊಡ್ಲಿಪೇಟೆ ಹಾಗೂ ಬ್ಯಾಡಗೊಟ್ಟ ಗ್ರಾಮ ಪಂಚಾಯಿತಿ ನಿಕಟ ಪೂರ್ವ ಅಧ್ಯಕೆÀ್ಷ ರೋಹಿಣಿ ಸುಬ್ರಮಣ್ಯ, ನಿರ್ಮಲ ಸುಂದರ್, ಧ.ಗ್ರಾ.ಯೋ. ತಾಲೂಕು ಕೃಷಿ ಅಧಿಕಾರಿ ಗೀತಾ, ವಲಯ ಮೇಲ್ವಿಚಾರಕ ರಮೇಶ್, ಸೇವಾಕೆಂದ್ರದ ಪ್ರಬಂಧಕ ಅಭಿಷೆÉೀಕ್, ಯಂತ್ರ ಚಾಲಕ ಪರಮೇಶ್, ಸೇವಾ ಪ್ರತಿನಿಧಿ ಗಳಾದ ಸಂಶೀದ್, ರಾಣಿ, ಶಾರದ, ಸುಧಾ, ಇನ್ನಿತರರು ಹಾಜರಿದ್ದರು.