ಸಿದ್ದಾಪುರ, ಜು. 11: ನೆಲ್ಲಿಹುದಿಕೇರಿ ಗ್ರಾ.ಪಂ ವ್ಯಾಪ್ತಿಗೆ ಒಳಪಡುವ ಬೆಟ್ಟದಕಾಡು ಭಾಗದಲ್ಲಿ ವ್ಯಕ್ತಿಯೊಬ್ಬರಿಗೆ ಕೊರೊನಾ ವೈರಸ್ ಪತ್ತೆಯಾದ ಹಿನ್ನೆಲೆಯಲ್ಲಿ ಆ ಭಾಗದಲ್ಲಿ ಸೀಲ್‍ಡೌನ್ ಮಾಡಲಾಗಿತ್ತು. ಸೀಲ್‍ಡೌನ್ ಆದ ಪ್ರದೇಶದ ನಿವಾಸಿಗಳಿಗೆ ಕೆಲವು ದಾನಿಗಳು ಹಸಿಮೀನು, ಹಾಲು, ತರಕಾರಿಗಳನ್ನು ಶುಕ್ರವಾರದಂದು ವಿತರಿಸಿದರು. ನೆಲ್ಲಿಹುದಿಕೇರಿಯ ಸಿ.ಎಂ. ಮೀನು ಕಂಪೆನಿಯ ವತಿಯಿಂದ ನೂರಾರು ಮನೆಗಳಿಗೆ ತಲಾ ಒಂದು ಕೆ.ಜಿ ಹಸಿ ಮತ್ತಿ ಮೀನುಗಳನ್ನು ವಿತರಿಸಲಾಯಿತು. ಇದಲ್ಲದೇ ಸಿದ್ದಾಪುರದ ತರಕಾರಿ ವ್ಯಾಪಾರಿ ಅಶ್ರಫ್ (ಅಚ್ರು) ಅವರ ವತಿಯಿಂದ ಎಲ್ಲಾ ಮನೆಗಳಿಗೆ ತರಕಾರಿ ಕಿಟ್‍ಗಳನ್ನು ವಿತರಿಸಲಾಯಿತು. ನೆಲ್ಲಿಹುದಿಕೇರಿ ನಿವಾಸಿ ತೆರಂಬಳ್ಳಿ ಚಂದ್ರು ಅವರಿಂದ ಹಾಲು ವಿತರಣೆ ಮಾಡಲಾಯಿತು. ಈ ಸಂದರ್ಭ ಗ್ರಾ.ಪಂ. ಸದಸ್ಯರುಗಳಾದ ಹನೀಫ, ಅಫÀ್ಸಲ್, ಅನ್ನಮ್ಮ, ಮರಿಯಾ ಇನ್ನಿತರರು ಹಾಜರಿದ್ದರು.