ಭಾಗಮಂಡಲ, ಜು. 11: ಬೇಂಗೂರು ಗ್ರಾ.ಪಂ. ಚೇರಂಬಾಣೆ ಯಲ್ಲಿ ಕೊರೊನಾ ಸೋಂಕಿತರು ಇರುವುದರಿಂದ ಚೇರಂಬಾಣೆಯ ಒಂದು ಭಾಗವನ್ನು ಈಗಾಗಲೇ ಸೀಲ್‍ಡೌನ್ ಮಾಡಲಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಸಾರ್ವಜನಿಕರು, ಸಂಘ-ಸಂಸ್ಥೆ ಮತ್ತು ಗ್ರಾ.ಪಂ.ಯವರು ಸೇರಿ ಮಂಗಳವಾರ ನಡೆಯುವ ವಾರದ ಸಂತೆ ಮತ್ತು ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಬೆಳಿಗ್ಗೆ 7 ಗಂಟೆಯಿಂದ ಸಂಜೆ 7 ಗಂಟೆವರೆಗೆ ಬಂದ್ ಮಾಡಲು ತೀರ್ಮಾನಿಸಿದ್ದು ಬೇರೆ ದಿನದಲ್ಲಿ ಬೆಳಿಗ್ಗೆ 7ರಿಂದ 2 ಗಂಟೆ ತನಕ ಮಾತ್ರ ಅಂಗಡಿಗಳನ್ನು ತೆರೆಯಲು ನಿರ್ಧರಿಸಿದ್ದಾರೆ.