ವೀರಾಜಪೇಟೆ, ಜು. 11: ಗೃಹಿಣಿಯೊರ್ವರು ನೇಣಿಗೆ ಶರಣಾದ ಘಟನೆ ವೀರಾಜಪೇಟೆಯ ಅಮ್ಮತ್ತಿ ಒಂಟಿಅಂಗಡಿಯಲ್ಲಿ ನಡೆದಿದೆ.
ವೀರಾಜಪೇಟೆ ತಾಲೂಕಿನ ಅಮ್ಮತ್ತಿ ಒಂಟಿಅಂಗಡಿ ಗ್ರಾಮದ ನಿವಾಸಿ ಟಿ.ಎಂ. ಅನಿಲ್ ಅವರ ಪತ್ನಿ ಸುಮಿತ್ರಾ (28) ನೇಣಿಗೆ ಶರಣಾದ ದುರ್ದೈವಿ. ನೆಲ್ಯಹುದಿಕೇರಿ ಗ್ರಾಮದ ಟಿ.ಎಸ್. ಸುಕುಮಾರ್ ಅವರ ಪುತ್ರಿ ಸುಮಿತ್ರಾ ಒಂಟಿಅಂಗಡಿ ಗ್ರಾಮದಲ್ಲಿ ಹೊಟೇಲ್ ನಡೆಸುತ್ತಿದ್ದ ಟಿ.ಎಂ. ಅನೀಲ್‍ರನ್ನು ವಿವಾಹವಾಗಿ 7 ವರ್ಷಗಳು ಸಂದಿದ್ದು, 6 ವರ್ಷದ ಹೆಣ್ಣು ಮಗಳಿದ್ದಾಳೆ.
ಪತಿ ಮತ್ತು ಪತ್ನಿ ಅನ್ಯೋನ್ಯವಾಗಿದ್ದು, ಯಾವುದೇ ರೀತಿಯ ಭಿನ್ನಾಬಿಪ್ರಾಯಗಳು ಇಲ್ಲದಾಗಿತ್ತು ಎಂದು ಕುಟುಂಬ ಮೂಲಗಳಿಂದ ತಿಳಿದುಬಂದಿದೆ. ಇಂದು ಬೆಳಿಗ್ಗೆ 8.30ರ ಸಮಯದಲ್ಲಿ ಮನೆಯ ಮಲಗುವ ಕೋಣೆಯ ಗಾಳಿ ಯಂತ್ರಕ್ಕೆ ತನ್ನ ವೇಲ್‍ನಿಂದ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿಷಯ ತಿಳಿದು ಪತಿ ಅನಿಲ್ ಮತ್ತು ತಮ್ಮ ಸನಿಹದ ಅಮ್ಮತ್ತಿ ಆರ್.ಐ.ಹೆಚ್.ಪಿ. ಆಸ್ಪತ್ರೆಗೆ ದಾಖಲಿಸಿದ್ದಾರೆ. ವೈದÀ್ಯರು ಪ್ರಾಣ ಹೊಗಿದೆ ಎಂದು ದೃಢಪಡಿಸಿದ್ದಾರೆ.
ನಂತರದಲ್ಲಿ ವೀರಾಜಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಶವಪರೀಕ್ಷೆ ಮಾಡಲಾಗಿದ್ದು, ಮೃತಶÀರೀರವನ್ನು ಕುಟುಂಬಕ್ಕೆ ಹಸ್ತಾಂತರ ಮಾಡಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತಳ ತಂದೆ ಸುಕುಮಾರ್ ಅವರು ನೀಡಿದ ದೂರಿನ ಮೇರೆಗೆ ಆತ್ಮಹತ್ಯೆ ಪ್ರಕರಣ ದಾಖಲು ಮಾಡಿದ್ದಾರೆ, -ಕೆ.ಕೆ.ಎಸ್.